ಸುಳ್ಯದ ಶ್ರೀ ಶಾರದಾಂಬ ದಸರಾ ಶೋಭಾಯಾತ್ರೆ

0

ಶೋಭಾಯಾತ್ರೆಗೆ ಮೆರಗು ತಂದ ಆಕರ್ಷಕ ಸ್ಥಬ್ಧಚಿತ್ರಗಳು

ಸುಳ್ಯದ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿಯ ಆಶ್ರಯದಲ್ಲಿ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ಹಲವು ವೈದಿಕ – ಧಾರ್ಮಿಕ, ಸಾಂಸ್ಕೃತಿಕ ಸಭಾ ಕಾರ್ಯಕ್ರಮದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಿದ ಶ್ರೀ ಶಾರದಾಂಬ ಉತ್ಸವದ ಶೋಭಾಯಾತ್ರೆಯು ಸುಳ್ಯದ ಪ್ರಮುಖ ರಸ್ತೆಗಳಲ್ಲಿ ಸಾಗಿ ಬರುತ್ತಿದ್ದು, ಹತ್ತು ಹಲವು ಆಕರ್ಷಕ ಸ್ಥಬ್ಧಚಿತ್ರಗಳು ಶೋಭಾಯಾತ್ರೆಗೆ ಮೆರಗು ಹೆಚ್ಚಿಸಿದೆ.

ಶೋಭಾಯಾತ್ರೆಯಲ್ಲಿ ಕಾರ್ಗಿಲ್ ಬಾಯ್ಸ್ ತಂಡದ ಮತ್ಸ್ಯಾವತಾರದ ಟ್ಯಾಬ್ಲೋ, ಧ್ವನಿ ಬೆಳಕು ಶಾಮಿಯಾನದ ಕೇರಳ ಶೈಲಿಯ ನೃತ್ಯ ಟ್ಯಾಬ್ಲೋ, ಟೀಂ ಜಟಾಯು ತಂಡದ ನವರಾತ್ರಿ ವಿಶೇಷ ಟ್ಯಾಬ್ಲೋ, ಡಿ.ಜೆ. ಫ್ರೆಂಡ್ಸ್ ಹುಲಿವೇಷ ಕುಣಿತ, ಕೇರ್ಪಳ ದುರ್ಗಾಪರಮೇಶ್ವರಿ ಕುಣಿತ ಭಜನಾ ತಂಡ, ವಿಷ್ಣುಸರ್ಕಲ್ ವೀರಕೇಸರಿ ಶ್ರೀರಾಮ ಹನುಮಂತನ ಟ್ಯಾಬ್ಲೋ, ಮಂಜು ಬ್ರದರ್ಸ್ ನೃತ್ಯ ಟ್ಯಾಬ್ಲೋ , ಗಜಕೇಸರಿಯ ಟ್ಯಾಬ್ಲೋ, ಅರಣ್ಯ ಇಲಾಖೆಯ ಕಾಡುಸಂರಕ್ಷಣಾ ಟ್ಯಾಬ್ಲೋ ಸೇರಿದಂತೆ ಇನ್ನಿತರ ಟ್ಯಾಬ್ಲೋಗಳು ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಶ್ರೀದೇವಿಯ ಶೋಭಾಯಾತ್ರೆಯೊಂದಿಗೆ ಸಾಗಿತು.


ಇನ್ನೂ ಹಲವಾರು ಟ್ಯಾಬ್ಲೋಗಳಿದ್ದು, ಸುಳ್ಯ ನಗರದ ಹಳೆಗೇಟು, ಓಡಬಾಯಿಯಿಂದ ಸೇರಿಕೊಳ್ಳಲಿದೆ.