ಇಂದು ಸುಳ್ಯ ದಸರಾ ಶ್ರೀ ಶಾರದಾ ದೇವಿಯ ಶೋಭಾಯಾತ್ರೆ

0

ಸುಳ್ಯ ದಸರಾ ಪ್ರಯುಕ್ತ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆಯು ಇಂದು ಸಂಜೆ ನಡೆಯಲಿದ್ದು ಪ್ರತೀ ವರ್ಷದಂತೆ ಈ ವರ್ಷವೂ ಡಿ.ಜೆ.ಫ್ರೆಂಡ್ಸ್ ವತಿಯಿಂದ 6 ನೇ ವರ್ಷದ ಹುಲಿ ವೇಷ ಮತ್ತಷ್ಟು ಮೆರುಗು ನೀಡುಯ್ತುದೆ.

ಹುಲಿವೇಷ ಪೂರ್ವಭಾವಿಯಾಗಿ ಊದು ಪೂಜೆಯು ಸುಳ್ಯ ರೋಟರಿ ಶಾಲೆಯ ಮುಂಭಾಗದಲ್ಲಿ ಅ.16 ರಂದು ರಾತ್ರಿ ನಡೆದಿತ್ತು.
ಇಂದು ಶ್ರೀ ಶಾರದಾ ದೇವಿಯ ಶೋಭಾಯಾತ್ರೆಯ ಮೊದಲು ಹುಲಿ ವೇಷ ಕುಣಿತ ಪ್ರಾರಂಭಗೊಂಡಿದ್ದು ವೀಕ್ಷಕರನ್ನು ಮನರಂಜಿಸುತ್ತಿದೆ.
ಡಿ.ಜೆ.ಫ್ರೆಡ್ಸ್ ನ ಸ್ಥಾಪಕಾಧ್ಯಕ್ಷ ದೀಪಕ್ , ಅಧ್ಯಕ್ಷ ದೀಕ್ಷಿತ್ ರಾವ್,ಉಪಾಧ್ಯಕ್ಷ ಭರತ್ ಪೂಜಾರಿ,ಕಾರ್ಯದರ್ಶಿ ಸಚಿನ್ ಜಾಲ್ಸೂರು,ಖಜಾಂಜಿ ದಿನೇಶ್ ಪಿ.ಎಸ್ .ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದಾರೆ.