ಅಧ್ಯಕ್ಷರಾಗಿ ಅಶ್ರಫ್ ಬಿಳಿಯಾರ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಝಾಹಿರ್ ಪೆರಾಜೆ
ಪೆರಾಜೆ ಮುನವ್ವಿರುಲ್ ಇಸ್ಲಾಂ ಜಮಾಅತ್ ಇದರ ಗಲ್ಫ್ ಕಮಿಟಿಯ (MIJGC ) ವಾರ್ಷಿಕ ಮಹಾಸಭೆಯು ಬಾತಿಷಾ ಬಿಳಿಯಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪೆರಾಜೆ ಮಸೀದಿ ಖತೀಬರಾದ ಅಶ್ರಫ್ ಸಅದಿ ನೆಲ್ಯಾಡಿ ದುವಾ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಅಶ್ರಫ್ ಬಿಳಿಯಾರ್ ಸರ್ವರನ್ನೂ ಸ್ವಾಗತಿಸಿದರು. ಸಭಾ ಉದ್ಘಾಟನೆಯನ್ನು ಸಂಶುದ್ದೀನ್ ಮುಸ್ಲಿಯಾರ್ ನಿರ್ವಹಿಸಿದರು.ವಾರ್ಷಿಕ ವರದಿ ಮಂಡನೆಯನ್ನು ಅಶ್ರಫ್ ಬಿಳಿಯಾರ್ ವಾಚಿಸಿ,ವಾರ್ಷಿಕ ಲೆಕ್ಕ ಪತ್ರವನ್ನು ಹಮೀದ್ ಎಂ ಐ ಮಂಡಿಸಿದರು.
ನಂತರ ಆಧ್ಯಕ್ಷರ ಭಾಷಣವನ್ನು ಮಾಡಿದ ಬಾತಿಷ ಬಿಳಿಯಾರ್ ರವರು ಆಡಳಿತ ಸಮಿತಿಯೊಂದಿಗೆ ಬೆನ್ನೆಲುಬಾಗಿ ನಿಂತು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತಾ ಕಳೆದ ಆಡಳಿತ ಅವಧಿಯಲ್ಲಿ ಆಯೋಜಿಸಿದ ಯಶಸ್ವಿ ಯೋಜನೆಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಬಳಿಕ ನೂತನ ಕಾರ್ಯಕಾರಿ ಸಮಿತಿ ರಚನೆ ಮಾಡಲಾಯಿತು.ಗೌರವಾಧ್ಯಕ್ಷರಾಗಿ ಅಬ್ದುಲ್ ಖಾದರ್ ಸಅದಿ, ಅಧ್ಯಕ್ಷರಾಗಿ ಅಶ್ರಫ್ ಬಿಳಿಯಾರ್,ಪ್ರದಾನ ಕಾರ್ಯದರ್ಶಿ ಝಾಹಿರ್ ಪೆರಾಜೆ,ಉಪಾಧ್ಯಕ್ಷರುಗಳಾಗಿ ಸಂಶುದ್ದೀನ್ ಮುಸ್ಲಿಯಾರ್,ಹಮೀದ್ ಎಂ ಐ,ಗೌರವ ಸಲಹೆಗಾರರಾಗಿ ಬಾತಿಷಾ ಬಿಳಿಯಾರ್,ಖಜಾಂಜಿ ನಿಝಾರ್ ಬಿಳಿಯಾರ್ ಜೊತೆ ಕಾರ್ಯದರ್ಶಿ ಶರೀಫ್ ಅಜ್ಮಾನ್, ಮೀಡಿಯಾ ವಿಂಗ್ ತಾಹಿರ್ ಅಹದ್,ಎಕ್ಸಿಕ್ಯೂಟಿವ್ ಸದಸ್ಯರಾಗಿ ಹುಝೈಫ ಪೆರಾಜೆ,ಅಶ್ರಫ್ ಗುರುಂಪು, ಫಾರೂಕ್ ಬಿಳಿಯಾರ್ ಸಮದ್ ಬಿಳಿಯಾರ್, ನವಾಝ್ ಪೆರಾಜೆ,ತೌಫೀರ್ ಪೆರಾಜೆ,ಹಮೀದ್ ಪಿ ಬಿ,ಜುನೈದ್ ಡಿ ಎಸ್,ಸವಾದ್ ಪೆರಾಜೆ ಯವರನ್ನು ಆಯ್ಕೆ ಮಾಡಲಾಯಿತು.ಪ್ರಧಾನ ಕಾರ್ಯದರ್ಶಿ ಝಾಹಿರ್ ಪೆರಾಜೆ ವಂದಿಸಿದರು.