ಬಾಳಿಲ ಗ್ರಾಮದ ಕಾಂಚೋಡು ನಿವಾಸಿಯಾದ ಅಂಗಾರ ಮತ್ತು ಲಕ್ಷ್ಮಿ ಇವರ ಪುತ್ರರಾದ ಮಹೇಶ್ ಬಾಳಿಲ ಇವರು ಸೆಪ್ಟೆಂಬರ್ ಲ್ಲಿ ನಡೆದ ಯುಜಿಸಿ-ನೆಟ್ ಪರೀಕ್ಷೆಯ ದೈಹಿಕ ಶಿಕ್ಷಣ ವಿಷಯದಲ್ಲಿ ತೇರ್ಗಡೆಗೊಂಡು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಮತ್ತು ತಮ್ಮ ಪಿ.ಎಚ್.ಡಿ ಅಧ್ಯಯನ ನಡೆಸಲು ಅರ್ಹರಾಗಿರುತ್ತಾರೆ. ಹಾಗೆಯೇ ಇದೇ ವರ್ಷ ನಡೆದ ಕರ್ನಾಟಕ ಸಹಾಯಕ ಪ್ರಾಧ್ಯಾಪಕ ಪರೀಕ್ಷೆ ( ಕೆಸೆಟ್) ನ್ನು ಕೂಡ ತೇರ್ಗಡೆಗೊಂಡಿರುತ್ತಾರೆ. ಇವರು ಪ್ರಸ್ತುತ ಶ್ರೀ ಚೈತನ್ಯ ಪದವಿಪೂರ್ವ ಕಾಲೇಜು, ಮಂಗಳೂರು ಇಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿ.ಪಿ.ಎಡ್ ಮತ್ತು ಎಂ.ಪಿ.ಎಡ್ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮುಗಿಸಿರುತ್ತಾರೆ.ಇವರು ವಿವೇಕಾನಂದ ಕಾಲೇಜು ಪುತ್ತೂರು, ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಮತ್ತು ವಿದ್ಯಾಬೋಧಿನಿ ವಿದ್ಯಾಸಂಸ್ಥೆ ಬಾಳಿಲದ ಹಿರಿಯ ವಿದ್ಯಾರ್ಥಿಯಾಗಿರುತ್ತಾರೆ.