ಸುಳ್ಯದ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಆಯುಷ್ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇದರ ಸಹಯೋಗದೊಂದಿಗೆ ಅ. 29ರಂದು ನಡೆಯಲಿರುವ 9ನೇ ವರ್ಷದ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಪ್ರಯುಕ್ತ ಆಯುರ್ವೇದ ಸಪ್ತಾಹ ಕಾರ್ಯಕ್ರಮವನ್ನು ಅ. 21ರಿಂದ 29ರರ ತನಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮೂರನೇ ದಿನವಾದ ಅ. 23ರಂದು ಮಹಿಳಾ ಮಂಡಳಿಗಳ ಒಕ್ಕೂಟದಲ್ಲಿ 22ರಿಂದ 45 ವಯಸ್ಸಿನ ಮಹಿಳೆಯರ ಯೋಗಕ್ಷೇಮದಲ್ಲಿ ಆಯುರ್ವೇದ ಪಾತ್ರ” ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಗಾರ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಯಿತು. ಮಾಹಿತಿ ಕಾರ್ಯಾಗಾರವನ್ನು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ದ್ರವ್ಯಗುಣ ವಿಭಾಗದ ಪ್ರೊಫೇಸರ್ ಡಾ.ವಿಜಯಲಕ್ಷ್ಮಿ ಪಿ. ಬಿ. ನಡೆಸಿಕೊಟ್ಟರು. ಮಹಿಳಾ ಸಮಾಜದ ಪದಾಧಿಕಾರಿಗಳು, ಮಹಿಳಾ ಮಂಡಳಿಗಳ ಸದಸ್ಯರುಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು,.
ಕಾರ್ಯಕ್ರಮದ ಉದ್ಘಾಟನೆಯನ್ನು ಗಾಯತ್ರಿ ಜಿ ನಾಯಕ್, ಡಾ. ವಿಜಯಲಕ್ಷ್ಮಿ ಪಿ. ಬಿ., ಮಧುಮತಿ ಬೊಳ್ಳೂರು, ಅನಿತಾ ಸುತ್ತುಕೋಟೆ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಮಹಿಳಾ ಮಂಡಳಿಯ ಒಕ್ಕೂಟದ ಅಧ್ಯಕ್ಷರಾದ ಮಧುಮತಿ ಬೊಳ್ಳೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮಹಿಳಾ ಮಂಡಳಿಯ ಒಕ್ಕೂಟದ ಉಪಾಧ್ಯಕ್ಷರಾದ ಪುಷ್ಪಾ ಡಿ. ಪ್ರಸಾದ್ ಸ್ವಾಗತಿಸಿ, ಮಹಿಳಾ ಮಂಡಳಿಯ ಒಕ್ಕೂಟದ ಕಾರ್ಯದರ್ಶಿ ಅನಿತಾ ಸುತ್ತುಕೋಟೆ ವಂದಿಸಿದರು. ಶ್ರೀನಿಧಿ ಮಹಿಳಾ ಮಂಡಳಿ ಕಾಯರ್ತೋಡಿಯ ಹೇಮಾ ವೇಣುಗೋಪಾಲ ಕಾರ್ಯಕ್ರಮ ನಿರೂಪಿಸಿದರು. ಜೂನಿಯರ್ ಕಾಲೇಜಿನ ಪ್ರಶಿಕ್ಷಣಾರ್ತಿ ಶ್ರಾವ್ಯ ಪ್ರಾರ್ಥಿಸಿದರು.
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಡಾ. ಸ್ಮಿತಾ ಪಿ. ಕೆ., ಡಾ. ಅವಿನಾಶ್ ಎಸ್., ಡಾ. ಶ್ರೇಯಾ ಪಿ., ಡಾ. ನಿತೀಶ್ ಕೆ. ಸಹಕರಿಸಿದರು.