ಭಜನೆಯ ಕುರಿತು ಅವಹೇಳನಕಾರಿ ಹೇಳಿಕೆಗೆ ಖಂಡನೆ
ಸುಳ್ಯ ತಾಲೂಕು ಮಂಜುನಾಥೇಶ್ವರ ಭಜನಾ ಪರಿಷತ್ ನ ಮಾಸಿಕ ಸಭೆಯು ಅ.25 ರಂದು ತಾಲೂಕು ಯೋಜನಾಧಿಕಾರಿ ಕಚೇರಿಯಲ್ಲಿ ನಡೆಯಿತು.
ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಯತೀಶ್ ರೈ ದುಗಲಡ್ಕ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ
ಭಜನೆಯ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ಧರ್ಮವನ್ನು ಒಡೆದು ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಮುಂದಾಗಿರುವ ದುಷ್ಟ ಶಕ್ತಿಗಳ ವಿರುದ್ಧ ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಯಿತು.
ತಾಲೂಕು ಯೋಜನಾಧಿಕಾರಿ ಮಾಧವ ಗೌಡ ರವರು ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಪರಿಷತ್ ನ ವಲಯವಾರು ಪದಾಧಿಕಾರಿಗಳ ಸಮರ್ಪಕ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಪ್ರಸ್ತುತ ವರ್ಷದ ಭಜನೋತ್ಸವ ಕಾರ್ಯಕ್ರಮ ಸಂಪಾಜೆ ವಲಯದ ಅರಂತೋಡಿನಲ್ಲಿ ನಡೆಸುವ ಕುರಿತು ಪ್ರಸ್ತಾಪಿಸಲಾಯಿತು.
ವೇದಿಕೆಯಲ್ಲಿ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ,
ಪರಿಷತ್ ಸಮನ್ವಯಾಧಿಕಾರಿ ಸಂತೋಷ್ ಪಿ ಮೂಡಬಿದಿರೆ,
ಪರಿಷತ್ ಕಾರ್ಯದರ್ಶಿ ಸತೀಶ್ ಟಿ.ಎನ್, ನಿರ್ದೇಶಕ ಸೋಮಶೇಖರ ಪೈಕ, ವಲಯವಾರು ಅಧ್ಯಕ್ಷರಾದ ತೀರ್ಥರಾಮ ಅಡ್ಕಬಳೆ, ವೆಂಕಟ್ರಮಣ, ಎಲ್ಯಣ್ಣ, ವೆಂಕಟ್ರಮಣ ಡಿ.ಜಿ, ಚಂದ್ರಶೇಖರ ದೊಡ್ಡೇರಿ,ಬಾಲಚಂದ್ರ, ಶ್ರೀದೇವಿ ಯವರು ಉಪಸ್ಥಿತರಿದ್ದರು.
ಪರಿಷತ್ ಪದಾಧಿಕಾರಿಗಳು ಮತ್ತು ನಿರ್ದೇಶಕರು,ವಲಯ ಮೇಲ್ವಿಚಾರಕರು,ಸೇವಾ ಪ್ರತಿನಿಧಿಗಳು, ಭಜನಾ ಮಂಡಳಿಯ ಪದಾಧಿಕಾರಿಗಳು
ಮತ್ತು ಸದಸ್ಯರು ಭಾಗವಹಿಸಿದರು.