ಸುಳ್ಯದಲ್ಲಿ ಹಕ್ಕೊತ್ತಾಯ ಸಭೆ
ರಾಜ್ಯ ಸರ್ಕಾರದ ೭ನೇ ವೇತನ ಆಯೋಗದ ಶಿಫಾರಸ್ಸಿನ ಅನುಷ್ಠಾನದಲ್ಲಿ ಕಳೆದ ೨೫ ತಿಂಗಳುಗಳಲ್ಲಿ ನಿವೃತ್ತರಾದ ಖಾಯಂ ನೌಕರರಿಗೆ ಉಂಟಾದ ಆರ್ಥಿಕ ನಷ್ಟದ ಅನ್ಯಾಯವನ್ನು ಸರಿಪಡಿಸಲು ಹಕ್ಕೊತ್ತಾಯ ಸಭೆ ಅ.೨೪ರಂದು ಸುಳ್ಯದ ಸಂಧ್ಯಾಶ್ಶ್ಮಿಯಲ್ಲಿ ಸಭೆ ನಡೆಯಿತು.
ಹಕ್ಕೊತ್ತಾಯ : ರಾಜ್ಯ ಸರ್ಕಾರವು ಕಳೆದ ಆಗಸ್ಟ್ ತಿಂಗಳಿನಲ್ಲಿ ರಾಜ್ಯ ಸರ್ಕಾರದ ನೌಕರರಿಗೆ ೭ ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜುಲೈ ೨೦೨೨ ಪೂರ್ವಾನ್ವಯವಾಗಿ ಜಾರಿ ಮಾಡಿ ಆರ್ಥಿಕ ಸೌಲಭ್ಯಗಳನ್ನು ಆಗಸ್ಟ್ ೨೦೨೪ ಅನುಷ್ಠಾನಕ್ಕೆ ತರಲು ಆದೇಶವನ್ನು ನೀಡಿತ್ತು .
ಆದರೆ ವೇತನ ಆಯೋಗದ ಶಿಫಾರಸ್ಸಿನ ಪೂರ್ವನ್ವಯ ಮತ್ತು ಆರ್ಥಿಕ ಸೌಲಭ್ಯಗಳ ಅನುಷ್ಠಾನ ಇದರ ಮಧ್ಯೆ ಅಂದರೆ ಜುಲೈ ೨೦೨೨ರಿಂದ ಜುಲೈ ೨೦೨೪ ರವರೆಗೆ ನಿವೃತ್ತರಾದ ನೌಕರರಿಗೆ ಕೇವಲ ಪಿಂಚಣಿಯನ್ನು ಪರೀಷ್ಕಸಿ , ನಿವೃತ್ತ ನೌಕರರಿಗೆ ಸಿಗಬೇಕಾದ ಆರ್ಥಿಕ ಸೌಲಭ್ಯಗಳಾದ ಕಮ್ಯುಟೇಷನ್,ಡಿಸಿಆರ್ ಜಿ,ಗಳಿಕೆ ರಜೆ ನಗದೀಕರಣವನ್ನು ಹಿಂದಿನ ವೇತನ ಆಯೋಗದ ಶಿಫಾರಸ್ಸಿನಿಂತೆ ನೀಡಿರುತ್ತದೆ.ಇದನ್ನು ಸರಿಪಡಿಸಿ ಪರೀಸ್ಕ್ರತ ಆದೇಶವನ್ನು ಮಾನ್ಯ ಮುಖ್ಯಮಂತ್ರಿಳು ಮಾಡಬೇಕೆಂಬ ಹಕ್ಕೋತ್ತಾಯ ಸಭೆವನ್ನು ಸಭೆಯಲ್ಲಿ ಮಂಡಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ಸುಳ್ಯ ನಿವೃತ್ತ ನೌಕರರ ವೇದಿಕೆಯ ಸಂಚಾಲಕ ಹೇಮನಾಥ್ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ತಾಲೂಕಿನ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ನಿವೃತ್ತ ವೈದ್ಯಾಧಿಕಾರಿ ಡಾ.ರಂಗಯ್ಯ ದೀಪ ಬೆಳಗಿಸಿದರು. ಬಳಿಕ ಮಾತನಾಡಿದ ಅವರು ಪರೀಸ್ಕೃತ ಆದೇಶವನ್ನು ಮುಖ್ಯಮಂತ್ರಿಗಳೇ ಮಾಡಬೇಕಾಗಿರುವುದರಿಂದ ಅವರ ತವರು ಜಿಲ್ಲೆಯಲ್ಲಿ ಬೃಹತ್ ಸಮಾವೇಶ ಮಾಡಿ ಹಕ್ಕೋತ್ತಾಯ ಮಾಡಿದರೆ ಬೇಡಿಕೆ ಈಡೇರಬಹುದು ಎಂದು ಹೇಳಿದರು. ನಿವೃತ್ತ ನೌಕರರ ಸಂಘದ ಖಜಾಂಚಿ ಸುಬ್ರಹ್ಮಣ್ಯ ಹೊಳ್ಳರವರು ನಮ್ಮ ಸದುzಶ ಬೇಗನೆ ಈಡೇರಿಲಿ ಎಂದು ಹಾರೈಸಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಸಂಚಾಲಕರಾದ ಸಿರಿಲ್ ಡಿ ಸೋಜರವರು, ಶ್ರೀಮತಿ ಮಂಜುಳಾ, ಶ್ರೀಮತಿ ವಿಜಯಾ ಪೈ ಹಾಗೂ ನಾರಾಯಣರವರು ಭಾಗವಹಿಸಿ ಇಲ್ಲಿಯವರೆಗೆ ಜಿಲ್ಲೆ ಮತ್ತು ರಾಜ್ಯದಲ್ಲಿ ನಡೆದಂತಹ ಹೋರಾಟ ಕುರಿತು ಮಾಹಿತಿಯನ್ನು ನೀಡಿ ಮುಂದಿನ ದಿನಗಳಲ್ಲಿ ಎಲ್ಲಾರೂ ಒಟ್ಟಾಗಿ ಶಾಂತಿಯುತವಾಗಿ ಹೋರಾಟವನ್ನು ಸಂಘಟಿಸಿ ಸರ್ಕಾರದಿಂದ ಪರೀಸ್ಕೃತ ಆದೇಶವನ್ನು ಮಾಡಿಸುವಲ್ಲಿ ಎಲ್ಲರ ಸಹಕಾರದ ಆಗತ್ಯದ ಕುರಿತು ಮಾತನಾಡಿದರು. ಸುಳ್ಯ ನಿವೃತ್ತ ನೌಕರರ ವೇದಿಕೆಯ ಇನ್ನೋರ್ವ ಸಂಚಾಲಕ ಶಿವರಾಮ ಕೇನಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ನಿವೃತ್ತ ವಿಜ್ಞಾನ ಶಿಕ್ಷಕ ಅಚ್ಯುತ ಪಿ ಇವರು ಮಾಡಿ , ನಿವೃತ್ತ ಪ್ರೌಢಶಾಲಾ ಮುಖ್ಯ ಶಿಕ್ಷಕ ರಾಮಚಂದ್ರ ಕಜ್ಜೋಡಿ ಧನ್ಯವಾದ ಅರ್ಪಿಸಿದರು. ಸುಮಾರು ೫೦ ನಿವೃತ್ತ ನೌಕರರು ಮತ್ತು ಸೇರಿದ ಎಲ್ಲರಿಗೂ ಲಘಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.