ಸುಳ್ಯ ತಾಲೂಕು ಭಜನಾ ಪರಿಷತ್ ವತಿಯಿಂದ ವರ್ಷಂಪ್ರತಿ ಭಜಕರ ಸಂಘಟನೆಗಾಗಿ ಹಮ್ಮಿಕೊಳ್ಳುವ ಭಜನೋತ್ಸವವು
ನ.17 ರಂದು ಅರಂತೋಡು ಎನ್.ಎಂ.ಪಿ.ಯು.
ಕಾಲೇಜು ವಠಾರದಲ್ಲಿ ನಡೆಯಲಿದ್ದು ಪೂರ್ವಭಾವಿ ಸಭೆಯು ಅರಂತೋಡು ತೊಡಿಕಾನ ಸಹಕಾರಿ ಸಂಘದ ಸಭಾಭವನದಲ್ಲಿ ಅ.25 ರಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಭಜನಾ ಪರಿಷತ್ ಅಧ್ಯಕ್ಷ ಯತೀಶ್ ರೈ ದುಗಲಡ್ಕ ವಹಿಸಿದ್ದರು.
ಕಾರ್ಯಕ್ರಮದ ರೂಪು ರೇಷೆಯ ಬಗ್ಗೆ ಯೋಜನಾಧಿಕಾರಿ ಮಾಧವ ಗೌಡ ರವರು ಪ್ರಾಸ್ತಾವಿಕ ಮಾತಿನೊಂದಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಭಜನೋತ್ಸವ ಸಮಿತಿಯ ನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಹರೀಶ್ ಕಂಜಿಪಿಲಿ ಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಕೆ.ಆರ್.ಪದ್ಮನಾಭ,
ಉಪಾಧ್ಯಕ್ಷರಾಗಿ ರಾಮಚಂದ್ರ ಕಲ್ಲುಗದ್ದೆ, ಚಂದ್ರಕಲಾ ಕುತ್ತಮೊಟ್ಟೆ,
ಕಾರ್ಯದರ್ಶಿ ಮೇಲ್ವಿಚಾರಕ ಗಂಗಾಧರ, ಜತೆ ಕಾರ್ಯದರ್ಶಿ ಭಾರತಿ ಪುರುಷೋತ್ತಮ, ಕೋಶಾಧಿಕಾರಿ ಭವಾನಿಶಂಕರ ಅಡ್ತಲೆ, ಗೌರವ ಸಲಹೆಗಾರರಾಗಿ ಕೇಶವ ಅಡ್ತಲೆ, ಕೆ.ಆರ್.ಗಂಗಾಧರ, ಪಿ.ಬಿ.ದಿವಾಕರ ರೈ, ಲೋಕನಾಥ್ ಅಮೆಚೂರ್, ಸಂತೋಷ್ ಕುತ್ತಮೊಟ್ಟೆ, ಚಂದ್ರಶೇಖರ ನೆಡ್ಚಿಲು, ಎ.ಕೆ.ಜತ್ತಪ್ಪ ಮಾಸ್ತರ್ , ಪೂವಯ್ಯ ಚೂರ್ನಾಡು, ಸರಸ್ವತಿ ಕಕ್ಕಾಡು,ಮಾಲತಿ ಭೋಜಪ್ಪ ರವರನ್ನು ಆಯ್ಕೆ ಮಾಡಲಾಯಿತು.
ಸಂಪಾಜೆ ವಲಯದ ಎಲ್ಲಾ ಭಜನಾ ಮಂಡಳಿಯ ಪದಾಧಿಕಾರಿಗಳನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು.
ಸಭೆಯು ಭಜನೋತ್ಸವ ಸಮಿತಿಯ ಅಧ್ಯಕ್ಷ ಹರೀಶ್ ಕಂಜಿಪಿಲಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದ ಆಯೋಜನೆಯ ಕುರಿತು ಚರ್ಚಿಸಲಾಯಿತು. ಒಟ್ಟು ಕಾರ್ಯಕ್ರಮದ ಅಯ ವ್ಯಯದ ಕುರಿತು ಅಂದಾಜು ಬಜೆಟ್ ರಚಿಸಲಾಯಿತು.
ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಲೋಕನಾಥ್ ಅಮೆಚೂರ್, ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಸಮನ್ವಯಾಧಿಕಾರಿ ಸಂತೋಷ್ , ಕೋಶಾಧಿಕಾರಿ ಮಹೇಶ್ ಮೇರ್ಕಜೆ, ತೀರ್ಥರಾಮ ಅಡ್ಕಬಳೆ, ಕೆ.ಆರ್.ಗಂಗಾಧರ,
ಭವಾನಿಶಂಕರ ಅಡ್ತಲೆ, ಚಂದ್ರಶೇಖರ ಬೆಳ್ಳಿಪ್ಪಾಡಿ, ಕಾರ್ಯದರ್ಶಿ ಸತೀಶ್ ಟಿ.ಎನ್, ಪರಿಷತ್ ನಿರ್ದೇಶಕ ಸೋಮಶೇಖರ ಪೈಕ ಉಪಸ್ಥಿತರಿದ್ದರು.
ಮೇಲ್ವಿಚಾರಕ ಗಂಗಾಧರ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ತಾರಾ ಚಿದಾನಂದ ವಂದಿಸಿದರು.
ಭಜನಾ ಮಂಡಳಿಯ ಪದಾಧಿಕಾರಿಗಳು
ಮತ್ತು ಸದಸ್ಯರು, ಮೇಲ್ವಿಚಾರಕರು,
ಸೇವಾ ಪ್ರತಿನಿಧಿಗಳು,ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು, ಶೌರ್ಯ ವಿಪತ್ತು ಘಟಕದ ಸದಸ್ಯರು ಭಾಗವಹಿಸಿದರು.