ವಿಶ್ವಕ್ಕೆ ಲಗೋರಿ ಆಟ ಪರಿಚಯಿಸಿದ ಕೀರ್ತಿ ದೊಡ್ಡಣ್ಣ ಬರೆಮೇಲು ರವರಿಗೆ ಸಲ್ಲುತ್ತದೆ: ಡಾ.ದೇವಿಪ್ರಸಾದ್ ಕಾನತ್ತೂರ್
ವನಿತಾ ಸಮಾಜ(ರಿ) ಪಂಜ ಇದರ ಆಶ್ರಯದಲ್ಲಿ 60 ನೇ ವರುಷದ ಸಂಭ್ರಮ ಮತ್ತು ದೀಪಾವಳಿ ಪ್ರಯುಕ್ತ 18 ವರುಷ ಮೇಲ್ಪಟ್ಟ ಮಹಿಳೆಯರಿಗೆ ಮುಕ್ತ ಲಗೋರಿ ಪಂದ್ಯಾಟ ಅ.27 ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ. “ಲಗೋರಿ ಆಟಕ್ಕೆ ಬೇಕಾದ ಉತ್ತಮ ನಿಯಮಗಳನ್ನು ಆಳವಡಿಸಿ ಕೊಂಡು ವಿಶ್ವ ಮಟ್ಟಕ್ಕೆ ಲಗೋರಿ ಆಟ ಪರಿಚಯಿಸಿದ ಕೀರ್ತಿ ದೊಡ್ಡಣ್ಣ ಬರೆಮೇಲು ರವರಿಗೆ ಸಲ್ಲುತ್ತದೆ.” ಎಂದು ಅವರು ಹೇಳಿದರು.
“ಪಂಜ ವನಿತಾ ಸಮಾಜ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಾ ,ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಉತ್ತಮ ಸಂಸ್ಥೆ”.ಎಂದು ಅವರು ಹೇಳಿದರು
ಮುಖ್ಯ ಅತಿಥಿ ಲಗೋರಿ ಫೆಡರೇಷನ್ ಆಫ್ ಇಂಡಿಯಾ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಮಾತನಾಡಿ ” ಈ ಮಣ್ಣಿನಿಂದ ಆರಂಭಗೊಂಡ ಜಾನಪದ ಆಟ ಲಗೋರಿಗೆ ಈಗ ಉತ್ತಮ ಮನ್ನಣ್ಣೆ ದೊರಕಿದೆ. ಅದನ್ನು ಬೆಳೆಸಲು , ಆಯೋಜನೆಗೆ ರಾಷ್ಟ್ರಮಟ್ಟದಲ್ಲಿ ಫೆಡರೇಷನ್ ಮಾಡಿದ್ದೇವೆ.”ಎಂದು ಅವರು ಹೇಳಿದರು.
ವನಿತಾ ಸಮಾಜದ ಅಧ್ಯಕ್ಷೆ ಶ್ರೀಮತಿ ಸುಮಾ ಕುದ್ವ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸುಳ್ಯ ತಾಲೂಕು ಮಹಿಳಾ ಮಂಡಲದ
ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಧುಮತಿ ಬೊಳ್ಳೂರು, ವನಿತಾ ಸಮಾಜದ ನಿಕಟಪೂರ್ವಾಧ್ಯಕ್ಷೆ ಶ್ರೀಮತಿ ಮಾಲಿನಿ ಕುದ್ವ, ಕಾರ್ಯದರ್ಶಿ ಶ್ರೀಮತಿ ಸ್ವರ್ಣ ರೋಹಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಇದೇ ವೇಳೆ ವನಿತಾ ಸಮಾಜದ ಪೂರ್ವಾಧ್ಯಕ್ಷರಗಳನ್ನು ಗುರುತಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಚಿತ್ರಕಲಾ ಪ್ರಾರ್ಥಿಸಿದರು. ಶ್ರೀಮತಿ ಸುಮಾ ಕುದ್ವ ಸ್ವಾಗತಿಸಿದರು.ಶ್ರೀಮತಿ ಲತಾ ಮುಡೂರು, ಶ್ರೀಮತಿ ತುಳಸಿ ಪ್ರಸಾದ್ ಚೀಮುಳ್ಳು , ಶ್ರೀಮತಿ ಪವಿತ್ರ ಕುದ್ವ ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ ಸ್ವರ್ಣ ರೋಹಿತ್ ವಂದಿಸಿದರು.ಬಳಿಕ 18 ವರುಷ ಮೇಲ್ಪಟ್ಟ ಮಹಿಳೆಯರಿಗೆ ಮುಕ್ತ ಲಗೋರಿ ಪಂದ್ಯಾಟ ಹಾಗೂ ವೈಯಕ್ತಿಕ ಆಟಗಳು ಜರುಗಿತು.