ಕೊಡಗು ಸಂಪಾಜೆಯ ವ್ಯಕ್ತಿಯೋರ್ವರು ಅರಂತೋಡಿನ ಉಳುವಾರಿನಲ್ಲಿ ಕುಸಿದುಬಿದ್ದು, ಆಸ್ಪತ್ರೆಗೆ ಸಾಗಿಸಿದಾಗ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಅ.31ರಂದು ಬೆಳಿಗ್ಗೆ ಸಂಭವಿಸಿದೆ.
ಕೊಡಗು ಸಂಪಾಜೆ ಗ್ರಾಮದ ಬೈಲು ನಿವಾಸಿ ಐತಪ್ಪ ಕೆಮ್ಮಾರ ಅವರು ಬೆಳಿಗ್ಗೆ ಅರಂತೋಡಿನ ಉಳುವಾರು ಕುಟುಂಬದವರ ಮನೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಅವಲಕ್ಕಿ ಹಾಕುವ ಕಾರ್ಯಕ್ರಮಕ್ಕೆ ಹೋಗಿದ್ದರು.
ಅಲ್ಲಿಂದ ಹಿಂದಿರುಗುವ ವೇಳೆ ಮನೆಯಲ್ಲಿಯೇ ತಲೆ ತಿರುಗಿ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತಾದರೂ, ಅಲ್ಲಿ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.
ಮೃತರು ಪತ್ನಿ ಜಾನಕಿ , ಪುತ್ರ ದೀಕ್ಷಿತ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.