ರಾಜ್ಯ ಪ್ರಶಸ್ತಿ ಪುರಸ್ಕೃತ ಕಾಯರ್ತೋಡಿ ಮಿತ್ರ ಬಳಗದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಬಲಿಯೇಂದ್ರ ಅಲಂಕಾರ ಸ್ಪರ್ಧೆ ಹಾಗೂ ಗೂಡು ದೀಪ ಸ್ಪರ್ಧೆಯು ನ. 03 ರಂದು ನಡೆಯಿತು.
ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ ಅಲಂಕರಿಸಿದ ಬಲಿಯೇಂದ್ರನನ್ನು ವೀಕ್ಷಿಸಿ ಫಲಿತಾಂಶ ಘೋಷಿಸಲಾಯಿತು. ಬಲಿಯೇಂದ್ರ ಅಲಂಕಾರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗೋವಿಂದ ನಾಯ್ಕ ದುಗಲಡ್ಕ, ದ್ವಿತೀಯ ಬಹುಮಾನ ಪುಷ್ಪಾವತಿ ಆಚಾರ್ಯ ಕಾಯರ್ತೋಡಿ, ತೃತೀಯ ಬಹುಮಾನ ಹಿಮಕರ ಕುದ್ಪಾಜೆ ಯವರು ಪಡೆದರು.
ಸಂಜೆ ನಡೆದ ಗೂಡುದೀಪ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೇವಿಪ್ರಸಾದ ಜಿ ಸಿ ಕಾಯರ್ತೋಡಿ, ದ್ವಿತೀಯ ಬಹುಮಾನ ಸಿಂಚನ ಕೆ ಎಸ್ ಪಡೆದರು. ತೀರ್ಪುಗಾರರಾಗಿ ಕುಸುಮಾಧರ ಎ. ಟಿ, ಶಶಿಧರ ಮಾವಿನಕಟ್ಟೆ, ದೇವಿಪ್ರಸಾದ ಜಿ ಸಿ ಕಾಯರ್ತೋಡಿ ಸಹಕರಿಸಿದರು.
ಬಹುಮಾನ ವಿತರಣಾ ಕಾರ್ಯಕ್ರಮವು ಕಾಯರ್ತೋಡಿ ದೇವಳದ ವಠಾರದಲ್ಲಿ ಜರಗಿತು.
ಮಿತ್ರ ಬಳಗದ ಅಧ್ಯಕ್ಷ ದೇವಿಪ್ರಸಾದ್ ಎ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಕುಲ್ ದಾಸ್ ರವರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಿತ್ರ ಬಳಗದ ಪೂರ್ವಾಧ್ಯಕ್ಷ ವಾಸುದೇವ ಬೆಳ್ಳಿಪ್ಪಾಡಿ, ಮಿತ್ರ ಬಳಗದ ಪೂರ್ವಾಧ್ಯಕ್ಷ ಜಗದೀಶ್ ಕೆ ಎಲ್, ಮಹೇಶ್ ಕುದ್ಪಾಜೆ, ನವೀನ್ ಕುದ್ಪಾಜೆ ದಿವಾಕರ ಕೆ, ದೀಪಕ್ ಕೆ, ಪ್ರಶಾಂತ್ ಕೆ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ದೇವಿಪ್ರಸಾದ್ ಜಿ.ಸಿ ಕಾಯರ್ತೋಡಿ ಕಾರ್ಯಕ್ರಮ ನಿರೂಪಿಸಿದರು.