ಸುಳ್ಯ ತಾಲೂಕು ತೋಟ ತೊಳಿಲಾಲರ್ ಸಂಘದ ವತಿಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಚಾಲನೆ
ಸುಳ್ಯ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ಕಚೇರಿ ಮುಂಭಾಗ ಧರಣಿ ಕುಳಿತ ಸಂಘಟಕರು
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ಸುಳ್ಯ ಘಟಕದ ರಬ್ಬರ್ ತೋಟಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಹಲವಾರು ತೊಂದರೆಗಳಿದ್ದು ಇದಕ್ಕೆ ಪರಿಹಾರ ಸಿಗಬೇಕು. ಅಲ್ಲದೆ ಸಂಭಂದಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬಂದು ಸ್ಪಂದಿಸಬೇಕೆಂದು ಅಗ್ರಹಿಸಿ ಸುಳ್ಯ ತಾಲೂಕು ತೋಟ ತೊಳಿಲಾರ್ ಸಂಘದ ವತಿಯಿಂದ ನ. 6 ರಂದು ಸುಳ್ಯ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ಕಚೇರಿ ಮುಂಭಾಗ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಸಂಘದ ಅಧ್ಯಕ್ಷ ಚಂದ್ರ ಲಿಂಗಂ ದೀಪ ಬೆಳಗಿಸಿ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು .
ಈ ವೇಳೆ ಮಾತನಾಡಿದ ಅವರು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ಸುಳ್ಯ ಘಟಕದ ರಬ್ಬರ್ ತೋಟಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಹಲವಾರು ತೊಂದರೆಗಳಿವೆ. ತೋಟಗಳಲ್ಲಿ ಕೆಲಸ ಮಾಡುವ ಸಮಯ ಕಳೆ ಗಿಡಗಂಟಿಗಳ ಸಮಸ್ಯೆ, ಕಾಡುಪ್ರಾಣಿಗಳ ಹಾವಳಿ, ರಸಗೊಬ್ಬರದ ಸಮಸ್ಯೆ, ರಬ್ಬರ್ ಮರಗಳಿಗೆ ಔಷದಿ ಸಿಂಪಡನೆ ಮಾಡದಿರುವುದು, ಕಾರ್ಮಿಕರಿಗೆ ಬೋನಸ್ ನೀಡದಿರುವುದು,ವೇತನ ತಾರತಮ್ಯ ಮುಂತಾದ ಸಮಸ್ಯೆಗಳಿಂದ ಬಳಲುವ ಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಎಷ್ಟೇ ಬಾರಿ ಅಧಿಕಾರಿಗಳ ಗಮನಕ್ಕೆ ನೀಡಿದರು ಯಾವುದೇ ಉತ್ತರ ಸಿಗುತ್ತಿಲ್ಲ.
ಕಾಡುಪ್ರಾಣಿಗಳಿಂದ ಕಾರ್ಮಿಕರ ಜೀವಕ್ಕೆ ಅಪಾಯವಿದ್ದು ಅಲ್ಲದೆ ನಮ್ಮ ಅನೇಕ ಮೂಲಭೂತ ಸಮಸ್ಯೆಗಳಿಗೆ ಕೂಡಲೇ ಸಂಭಂದಪಟ್ಟ ಇಲಾಖೆಯ ಅಧಿಕಾರಿಗಳು ಸ್ಪಂದಿಸಬೇಕು.ಇಲ್ಲದಿದ್ದರೆ ಸಮಸ್ಯೆ ಬಗೆ ಹರಿಯುವ ವರೆಗೆ ನಾವು ಈ ಧರಣಿ ಸತ್ಯಾಗ್ರಹವನ್ನು ಕೈ ಬಿಡುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ತೋಟ ತೊಳಿಲಾಲರ್ ಸಂಘದ ಕಾರ್ಯಧ್ಯಕ್ಷ ಸೂರ್ಯ ಕುಮಾರ್, ಪ್ರ. ಕಾರ್ಯದರ್ಶಿ ರಾಜ ಕೃಷ್ಣ ಬಿಳಿನೆಲೆ, ಉಪಾಧ್ಯಕ್ಷರುಗಳಾದ ಅರುಣಾಚಲಂ, ಕಮಲ್ ರಾಜ್, ಅಣ್ಣಾ ದೊರಯ್, ಶಿವ ಕೊಂಬರ್, ಕೋಶಧಿಕಾರಿ ಸುಧಾಕರ್ ನಾಗಪಟ್ಟಣ, ಸಂಘಟನಾ ಕಾರ್ಯದರ್ಶಿ ಚಂದ್ರನ್, ಜೊತೆ ಕಾರ್ಯದರ್ಶಿಗಳಾದ ಆನಂದ್ ಕುಮಾರ್ ನಾಗಪಟ್ಟಣ, ಸರವಣ, ರವಿ ಬಾರ್ಪಣೆ, ಮಂಜುನಾಥ್ ಕಂದಡ್ಕ, ವಿಗ್ನೇಶ್ ಕಂದಡ್ಕ, ಚಿನ್ನ ತಂಬಿ ನಾರಡ್ಕ, ರವಿ ನಾರಾಡ್ಕ, ಕಂದ ಸ್ವಾಮಿ,ಈಶ್ವರನ್ ಕೊಣಾಜೆ, ಸುರೇಶ್ ಬೆತೋಡಿ,ಹಾಗೂ ಸದಸ್ಯರುಗಳು, ತಾಲೂಕಿನ ಬೇರೆ ಬೇರೆ ಕಡೆಗಳಲ್ಲಿ ಕೆಲಸ ನಿರ್ವಹಿಸುವ ರಬ್ಬರ್ ಕೂಲಿ ಕಾರ್ಮಿಕರು ಭಾಗವಹಿಸಿದ್ದರು.