ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆಯಲಿರುವ ಒಂದು ವಾರದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ನ. 6 ರಂದು ರಂದು ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನ ಮರ್ಕಂಜ- ರೆಂಜಾಳದ ಶ್ರೀ. ವಿನಾಯಕ ಸಭಾಭವನದಲ್ಲಿ ನಡೆಯಿತು.
ಶಿಬಿರದ ಮೊದಲನೇ ದಿನದ ಧ್ವಜಾರೋಹಣವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ ವಿ ಯವರು ನೆರವೇರಿಸಿದರು. ಶಿಬಿರದ ಉದ್ಘಾಟನೆಯನ್ನು ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನ ರೆಂಜಾಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹರೀಶ್ ಕಂಜಿಪಿಲಿ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಲೀಲಾಧರ ಡಿ ವಿ ಯವರು ವಹಿಸಿ ಅಧ್ಯಕ್ಷೀಯ ಮಾತುಗಳನ್ನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಮರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಹೊಸೊಳಿಕೆ, ಪುಟ್ಟಣ್ಣ ಗೌಡ ಬಾಣೂರು ಜಗನ್ಮೋಹನ್ ರೈ ಹೈದಂಗೂರು, ಶ್ರೀಮತಿ ರಾಜೇಶ್ವರಿ ಕುಮಾರಸ್ವಾಮಿ ಚಿನ್ನಪ್ಪ ಗೌಡ ಬೇರಿಕೆ, ದಾಮೋದರ ಪಾಟಾಳಿ,ಕುಮಾರಸ್ವಾಮಿ, ಮಹಾಬಲ ಕಟ್ಟಕೋಡಿ,ವಿಧ್ಯಾರ್ಥಿ ಕ್ಷೇಮಾಭಿವದ್ಧಿ ಅಧಿಕಾರಿ ಡಾ. ಹರ್ಷಿತಾ ಪುರುಷೋತ್ತಮ್, ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಯೋಜನಾಧಿಕಾರಿಯಾದ ಡಾ. ಪ್ರಮೋದ ಪಿ ಎ, ವಿಧ್ಯಾರ್ಥಿ ಸಂಘದ ಅಧ್ಯಕ್ಷರಾದ ಆರ್ಥಿಕ್ ಕೆ ಎಸ್, ಎನ್ ಎಸ್ ಎಸ್ ಘಟಕದ ನಾಯಕರುಗಳಾದ ಕುಮಾರಿ ಚೇತನ ಎಂ ಹಾಗೂ ವಿಶ್ವಾಸ್ ಗೌಡ ಇವರುಗಳು ವೇದಿಕೆಯಲ್ಲಿದ್ದರು.
ಶಿಬಿರಾರ್ಥಿಗಳಾದ ಕು. ಮೀನಾಕ್ಷಿ ಮತ್ತು ಕು. ಕಾವ್ಯ ಇವರು ಪ್ರಾರ್ಥಿಸಿ, ಕು. ಮೇಘನಾ ಸ್ವಾಗತಿಸಿ, ಕು.ಅಮೂಲ್ಯಶ್ರೀ ವಂದಿಸಿದರು. ಕು. ಚಿಂತನ ಹಾಗೂ ಕು. ಶ್ರಾವ್ಯ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ಶಿಬಿರವು ನ. 6 ರಿಂದ ನ. 12ರ ತನಕ ಜರುಗಲಿರುವುದು. ಈ ಶಿಬಿರದಲ್ಲಿ ಗ್ರಾಮದ ವಿವಿಧ ಶಾಲೆಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ, ಆರೋಗ್ಯ ಸಮೀಕ್ಷೆಯನ್ನು ನಡೆಸಲಾಗುವುದು.