ಅಮರಮುಡ್ನೂರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

0

ನಿವೇಶನ
ಬಳಕೆ ಮಾಡದ ಫಲಾನುಭವಿಗಳಿಗೆ ಪಂಚಾಯತ್ ನಿಂದ ನೋಟಿಸು ನೀಡಲು ತೀರ್ಮಾನ

ಅಮರಮುಡ್ನೂರು ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯು
ನ.12 ರಂದು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಾನಕಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

15 ನೇ ಹಣಕಾಸು ಯೋಜನೆಯ ಹಿಂದಿನ ಕಾಮಗಾರಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಚರ್ಚಿಸಲಾಯಿತು.

2014-15 ರಲ್ಲಿ ಪದವು ಎಂಬಲ್ಲಿ ನಿವೇಶನ ಹಂಚಿಕೆ ಮಾಡಲಾಗಿದ್ದು ಫಲಾನುಭವಿಗಳು ಬಳಸದೆ ಇದ್ದುದರಿಂದ ಅರ್ಜಿದಾರರಿಗೆ ನೋಟಿಸು ನೀಡಿ ನಿವೇಶನ ರದ್ದುಗೊಳಿಸುವ ಪ್ರಕ್ರಿಯೆ ನಡೆಸುವ ಬಗ್ಗೆ ನಿರ್ಣಯಿಸಲಾಯಿತು.

ಶೇಣಿ ವಾರ್ಡಿಗೆ ಸಂಬಂಧ ಪಟ್ಟಮಾನಸಿಕ ಅಸ್ವಸ್ಥರೊಬ್ಬರನ್ನು ಸೇವಾ ಆಶ್ರಮಕ್ಕೆ ಸೇರಿಸಲಾಗಿದ್ದು ಪಂಚಾಯತ್ ಸದಸ್ಯ ಅಶೋಕ ಚೂಂತಾರು ರವರ ನೇತೃತ್ವದಲ್ಲಿ ಸಂಗ್ರಹಿಸಿದ ಸಹಾಯಧನವನ್ನು ಪಂಚಾಯತ್ ಸದಸ್ಯರು ಸೇರಿಕೊಂಡು ಆಶ್ರಮಕ್ಕೆ ತೆರಳಿ ವಿತರಿಸುವ ಬಗ್ಗೆ ತೀರ್ಮಾನಿಸಲಾಯಿತು.
ಜೆ.ಜೆ.ಎಂ ನೀರಿನ ಸಂಪರ್ಕ ವ್ಯವಸ್ಥೆಯ ಕುರಿತು ಚರ್ಚಿಸುವ ಸಲುವಾಗಿ ಮುಂದಿನ
ನ.20 ರಂದು ಇಂಜಿನಿಯರ್ ಸಮ್ಮುಖದಲ್ಲಿ ಸಭೆ ಸೇರುವುದಾಗಿ ನಿರ್ಣಯಿಸಲಾಯಿತು.
ಪಂಚಾಯತ್ ಸಿಬ್ಬಂದಿ ಗಳ ವೇತನ ಪರಿಷ್ಕರಣೆಯ ಬಗ್ಗೆ ಚರ್ಚಿಸಲಾಯಿತು. ಆರ್ಥಿಕ ಸಮಿತಿ ಸದಸ್ಯರ ವರದಿ ಆಧಾರದ ಮೇಲೆ ವೇತನ ಪರಿಷ್ಕರಿಸುವುದಾಗಿ ತೀರ್ಮಾನ ಕೈಗೊಳ್ಳುವುದಾಗಿ ನಿರ್ಣಯಿಸಲಾಯಿತು.


ಗ್ರಾಮದಲ್ಲಿ ಬಾಕಿ ಇರುವ ವಸತಿ ಯೋಜನೆಯ ಮನೆಗಳ ಕೆಲಸ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆಯಾಯ ವಾರ್ಡಿನ ಸದಸ್ಯರು ಮುತುವರ್ಜಿ ವಹಿಸುವಂತೆ ವಿವರ ನೀಡಲಾಯಿತು.
ಅರ್ಜಿ ನೀಡಿದ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗಿದ್ದು ಗ್ರಾಮ ಆಡಳಿತಾಧಿಕಾರಿ ಯವರ ವರದಿ ಆಧಾರದ ಮೇಲೆ ಪರಿಗಣಿಸುವುದಾಗಿ ತೀರ್ಮಾನಿಸಲಾಯಿತು.


ಸಭೆಯಲ್ಲಿ
ಉಪಾಧ್ಯಕ್ಷೆ ಭುವನೇಶ್ವರಿ ಪದವು, ಸದಸ್ಯರಾದ ಅಶೋಕ ಚೂಂತಾರು, ಜಯಪ್ರಕಾಶ್ ದೊಡ್ಡಿಹಿತ್ಲು, ಹೂವಪ್ಪ ಗೌಡ ಆರ್ನೋಜಿ, ಜನಾರ್ದನ ಪೈಲೂರು, ರಾಧಾಕೃಷ್ಣ ಕೊರತ್ಯಡ್ಕ,ಸೀತಾ ಹೆಚ್, ದಿವ್ಯ ಮಡಪ್ಪಾಡಿ, ಶಶಿಕಲಾ ಕೇನಡ್ಕ, ಪದ್ಮಪ್ರಿಯ ಮೇಲ್ತೋಟ, ತೇಜಾವತಿ ಕುಂಟಿಕಾನ, ಮೀನಾಕ್ಷಿ ಚೂಂತಾರು ಹಾಗೂ ಪಿ.ಡಿ.ಒ ದಯಾನಂದ ಪತ್ತುಕುಂಜ ಉಪಸ್ಥಿತರಿದ್ದರು.
ಸಿಬ್ಬಂದಿ ವರ್ಗದವರು ಸಹಕರಿಸಿದರು.