ಸುನ್ನಿ ಮುಸ್ಲಿಂ ಜುಮಾ ಮಸೀದಿ ಕೊಯನಾಡು ಹಾಗೂ ನುಶ್ರತುಲ್ ಇಸ್ಲಾಂ ಅಸೋಸಿಯೇಶನ್ ಕೊಯನಾಡು ವತಿಯಿಂದ ಮೂರ್ನಾಡು ರೇಂಜ್ ಮಟ್ಟದ ಪ್ರತಿಭಾ ಸಂಗಮದಲ್ಲಿ ಸುಬುಲು ಸ್ಸಲಾಂ ಮದ್ರಸ ವಿಧ್ಯಾರ್ಥಿಗಳು ಸ್ಪರ್ಧಿಸಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಅದೇ ರೀತಿ ವಿದ್ಯಾರ್ಥಿಗಳನ್ನು ಪ್ರಥಮ ಬಾರಿಗೆ ಪ್ರತಿಭಾ ಸಂಗಮದಲ್ಲಿ ಭಾಗವಹಿಸುವಂತೆ ಮಾಡಿದ ಉಸ್ತಾದರಿಗೂ ಅಭಿನಂದಿಸಲಾಯಿತು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷರಾದ ಅಬ್ದುಲ್ ರಜಾಕ್ ವಹಿಸಿದರು, ಸದರ್ ಮುಅಲ್ಲಿಮ್ ನೌಶದ್ ಫಾಳಿಲಿ ಸ್ವಾಗತಿಸಿದರು, ಖತೀಬ್ ಮಹಮ್ಮದ್ ಸಖಾಫಿ ಅಲ್ ಹಿಕಮಿ ಉದ್ಘಾಟನೆ ಮಾಡಿ ಪ್ರಾಸ್ತಾವಿಕ ಮಾತನಾಡಿದರು. ಸಲಹಾ ಸಮಿತಿ ಸದಸ್ಯ ಹನೀಫ್ ಎಸ್ ಪಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ NIA ಅಧ್ಯಕ್ಷ ನಝೀರ್ ಮಾಡಶೇರಿ, ಸದಸ್ಯರಾದ ರಿಯಾಝ್, ಉಮ್ಮರ್, ಸುಬೈರ್, ಸೈನುದ್ದೀನ್, ರುನೈಝ್ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.