ಕೆವಿಜಿ ಐಪಿಎಸ್ 2024 -25 ರ ವಾರ್ಷಿಕ ಕ್ರೀಡಾಕೂಟ ನ. 15 ಮತ್ತು 16 ರಂದು ನಡೆಯಿತು. ಮುಖ್ಯ ಅತಿಥಿಗಳಾಗಿ ಕೆವಿಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಕನ್ಸರ್ವೇಟಿವ್ ಡೆಂಟಿಸ್ಟ್ರಿ ಹಾಗೂ ಎಂಡೋಡೊಂಟಿಕ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊ. ಡಾ. ಎಲ್ ಕೃಷ್ಣ ಪ್ರಸಾದ ಆಗಮಿಸಿ ಮಕ್ಕಳಿಗೆ ಕ್ರೀಡೆಯ ಪ್ರಾಮುಖ್ಯತೆಯನ್ನು ತಿಳಿಸಿದರು. ಕ್ರೀಡೆಯಿಂದ ದೇಹದಲ್ಲಿ ನವ ಚೈತನ್ಯ ಉಂಟಾಗುತ್ತದೆ. ಇದರಿಂದ ದೇಹದ ಮಾನಸಿಕ, ಶಾರೀರಿಕ ಬೆಳವಣಿಗೆಗೆ ಪೂರಕವಾದ ಅಂಶವು ದೇಹದಲ್ಲಿ ಬಿಡುಗಡೆಯಾಗುತ್ತದೆ, ಇದೊಂದು ಹಬ್ಬದ ವಾತಾವರಣ ಆನಂದವನ್ನು ಎಲ್ಲರೂ ಸವಿಯೋಣ ಎಂದು ಶುಭ ಹಾರೈಸಿದರು, ಇದೇ ಸಂದರ್ಭದಲ್ಲಿ ಶಾಲಾ ಕಾರ್ಯ ನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಮಾತನಾಡಿ ಜೀವನದಲ್ಲಿ ಮಕ್ಕಳು ಮೊಬೈಲ್ ಪ್ರಪಂಚದಿಂದ ಹೊರಗೆ ಬಂದು ಆಟೊಟದಲ್ಲಿ ಭಾಗವಹಿಸಲು ಕರೆ ನೀಡಿದರು. ಶಾಲಾ ಸಂಚಾಲಕರಾದ ಡಾ. ರೇಣುಕಾ ಪ್ರಸಾದ್ ಕ್ರೀಡೋತ್ಸವವನ್ನು ವಿದ್ಯುಕ್ತವಾಗಿ ಅನಾವರಣಗೊಳಿಸಿದರು.
ಕ್ರೀಡಾ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಲಹೆಗಾರರಾದ
ಜ್ಯೋತಿ ಆರ್. ಪ್ರಸಾದ್, ಎಜೆಪಿಯುಸಿ ಪ್ರಾಂಶುಪಾಲೆ ಡಾ. ಯಶೋಧ ರಾಮಚಂದ್ರ, ಐಟಿಐ ಪ್ರಾಂಶುಪಾಲರಾದ ಚಿದಾನಂದ ಬಾಳಿಲ, ಪ್ರಸನ್ನ ಕಲ್ಲಾಜೆ, ಐಪಿಎಸ್ ಪ್ರಾಂಶುಪಾಲರಾದ ಅರುಣ್ ಕುಮಾರ, ಉಪ ಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ ಹಾಗೂ ಶಾಲಾ ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕ್ರೀಡೋತ್ಸವದ ಎರಡನೆಯ ದಿನದಂದು ಶಾಲೆಯ ಎಲ್ಲಾ ಸಿಬ್ಬಂದಿ
ವರ್ಗದವರಿಗೆ ವರ್ಣ ರಂಜಿತ ಕ್ರೀಡೆಗಳನ್ನು ಆಯೋಜಿಸಲಾಯಿತು. ಕ್ಕ್ರೀಡೋತ್ಸವದ ಕೊನೆಯ ಅಂಗವಾಗಿ ಶಾಲಾ ಧ್ವಜ ಹಾಗೂ ಒಲಿಂಪಿಕ್ಸ್ ಧ್ವಜವನ್ನು ಅವರೋಹಣ ಮಾಡಿ ಧ್ವಜವನ್ನು ಪ್ರಾಂಶುಪಾಲರಿಗೆ ಹಾಗೂ ಉಪ ಪ್ರಾಂಶುಪಾಲರಿಗೆ, ದೈಹಿಕ ಶಿಕ್ಷಕರುಗಳಿಂದ ಹಸ್ತಾಂತರಿಸಲಾಯಿತು. ನಂತರ ಉಪ ಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ ವಂದನಾರ್ಪಣೆಗೈದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ದೈಹಿಕ ಶಿಕ್ಷಕರುಗಳಾದ ಪ್ರಶಾಂತ್ ಹಾಗೂ ಆಶಾಜ್ಯೋತಿ ಇವರ ನಿರ್ದೇಶನದಂತೆ ಕ್ರಿಡೋತ್ಸವವು ನಡೆಯಿತು.