ಮಾಜಿ ಸಿ.ಎಂ. ಡಿ.ವಿ.ಸದಾನಂದ ಸಹಿತ ಹಲವರು ಭಾಗಿ

ಮಂಡೆಕೋಲು ಗ್ರಾಮದ ಮುರೂರು – ಮೀನಗದ್ದೆ ನಡುಮನೆ ಕುಟುಂಬದ ಶ್ರೀ ರಕ್ತೇಶ್ವರಿ ಮೂಕಾಂಬಿಕಾ ಗುಳಿಗೆ ಹಾಗೂ ಭೈರವ ಸಾನಿಧ್ಯಗಳ ಪ್ರತಿಷ್ಠೆ ಎ.3ರಂದು ನಡೆಯಿತು.

ಬೆಳಗ್ಗೆ 9.18ರ ವೃಷಭ ಲಗ್ನದ ಶುಭಮುಹೂರ್ತದಲ್ಲಿ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್ ಪಯ್ಯನೂರ್ ಇವರ ಮಾರ್ಗದರ್ಶನದಲ್ಲಿ ಕರಾಯ ವೇದಮೂರ್ತಿ ಹರಪ್ರಸಾದ್ ವೈಲಾಯ ಇವರ ನೇತೃತ್ವದಲ್ಲಿ ದೈವಗಳ ಪ್ರತಿಷ್ಠೆ ನಡೆಯಿತು. ಬಳಿಕ ವಿವಿಧ ವೈದಿಕ ಕಾರ್ಯಕ್ರಮ ನಡೆಯಿತು.

ಕುಟುಂಬದ ಹಿರಿಯರು, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಸಹಿತ ಹಲವು ಮಂದಿ ಗಣ್ಯರು ಭಾಗವಹಿಸಿದರು.
ಇಂದು ರಾತ್ರಿ ದೈವಗಳ ನೇಮೋತ್ಸವ ನಡೆಯಲಿದೆ.
