ದಿ. ಕೂಸಪ್ಪ ಗೌಡ ನಡುಬೆಟ್ಟು ಶ್ರದ್ಧಾಂಜಲಿ ಸಭೆ

0

ಅಜ್ಜಾವರ ಗ್ರಾಮದ ಮುಳ್ಯ ಕೂಸಪ್ಪ ಗೌಡ ನಡುಬೆಟ್ಟು ರವರು ನ.12ರಂದು ನಿಧನರಾಗಿದ್ದು, ಅವರ ಉತ್ತರ ಕ್ರಿಯೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ನ.22 ರಂದು ಮುಳ್ಯ ಮನೆಯಲ್ಲಿ ನಡೆಯಿತು.

ನಿವೃತ್ತ ಶಿಕ್ಷಕ ಅಚ್ಚುತ ಅಟ್ಲೂರು ಹಾಗೂ ಇಟ್ಟಿಗುಂಡಿ ಚಿನ್ನಪ್ಪ ಗೌಡ ರವರು ನುಡಿನಮನ ಸಲ್ಲಿಸಿದರು.

ಕೂಸಪ್ಪ ಗೌಡರ ಮನೆಯವರಾದ ಮೋಹನ ಮುಳ್ಯ, ಭೋಜಪ್ಪ ಗೌಡ ಮುಳ್ಯ, ಶ್ರೀಮತಿ ಸುಜಾತ, ಶ್ರೀಮತಿ ಇಂದಿರಾ ಹಾಗು ಕುಟುಂಬಸ್ಥರು ಇದ್ದರು.

ನೂರಾರು ಮಂದಿ ಆಗಮಿಸಿ, ಶ್ರದ್ಧಾಂಜಲಿ ಸಲ್ಲಿಸಿದರು.