ಹಣ ಸಂಪಾದಿಸಿಲು ಏನೆಲ್ಲಾ ಮಾಡುತ್ತಾರೆ ನೋಡಿ…

0

ಮನೆ ಕೆಲಸಕ್ಕೆ ಬರುತ್ತೇವೆ ಎಂದು ಬಸ್ಸು ಖರ್ಚಿಗೆ ಹಣ ಕಳುಹಿಸಿ ಎಂದು ಹೇಳಿ ಹಣ ಲಪಟಾಯಿಸುವ ಹೊಸ ಪ್ಲ್ಯಾನ್

ಮನೆ ಕೆಲಸಕ್ಕೆ ಜನ ಬೇಕು ಎಂದು ಪತ್ರಿಕೆಯಲ್ಲಿ ಜಾಹೀರಾತು ನೋಡಿದೆ. ಆದರೆ ಬರುವುದಕ್ಕೆ ನನ್ನಲ್ಲಿ‌ ದುಡ್ಡಿಲ್ಲ. ಹಣ ಕಳುಹಿಸಿದರೆ ಬರುತ್ತೇನೆ ಎಂದು ಹೇಳಿದ ವ್ಯಕ್ತಿಗೆ, ಬಸ್ಸು ಖರ್ಚಿಗೆ ಎಂದು ಮಾನವೀಯತೆಯಿಂದ ಹಣ ಹಾಕಿದಿರೆಂದರೆ ಅತ್ತ ಹಣವೂ ಇಲ್ಲ… ಇತ್ತ ವ್ಯಕ್ತಿಯೂ ಇಲ್ಲದಂತಾದೀತು…ಎಚ್ಚರ.

ಇಂತಹದೊಂದು ಹಣ ಲಪಟಾಯಿಸುವ ಹೊಸ ಪ್ಲ್ಯಾನ್ ಹುಟ್ಟಿಕೊಂಡಿರುವುದಾಗಿ ವರದಿಯಾಗಿದೆ.

ಕೆಲದ ದಿನದ ಹಿಂದೆ ಮಂಗಳೂರಿನ ವ್ಯಕ್ತಿಯೊಬ್ಬರು ಮನೆಗೆಲಸಕ್ಕೆ ಜನ ಬೇಕಾಗಿದ್ದಾರೆ ಎಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದರು. ಪತ್ರಿಕೆ ನೋಡಿ ಕರೆ ಮಾಡಿದ ಮಹಿಳೆಯೊಬ್ಬರು “ನಾನು ಕೆಲಸಕ್ಕೆ ಬರುತ್ತೇನೆ. ಆದರೆ ಬರಲು ನನ್ನ ಬಳಿ ಹಣ ಇಲ್ಲ. ಒಂದು ಸಾವಿರ ಗೂಗಲ್ ಪೇ ಮಾಡಿ… ಬರುತ್ತೇನೆ” ಎಂದು‌ ವಿನಂತಿಸಿಕೊಂಡರು. ಅದರಂತೆ ಮಂಗಳೂರಿನ ಆ ವ್ಯಕ್ತಿ ಮಹಿಳೆಯ ನಂಬರಿಗೆ ರೂ. 500 ಹಣ ಹಾಕುತ್ತಾರೆ. ಆದರೆ ನಂತರ ಆ ಫೋನ್ ಸ್ವಿಚ್ಡ್ ಆಫ್. ಅತ್ತ ಜನವೂ ಇಲ್ಲ. ಇತ್ತ ಹಣವೂ ಇಲ್ಲ. ಮತ್ತೆ ಮರುದಿನ ಇನ್ನೊಂದು ನಂಬರಿಂದ ಅದೇ ರೀತಿ ಫೋನ್ ಕರೆ ಬಂತು.


ಆಗ ಅವರಿಗೆ ತಾನು ಮೋಸ ಹೋಗುತ್ತಿರುವ ಬಗ್ಗೆ ಅರಿವಿಗೆ ಬಂದು, ನೀವಿರುವ ಸ್ಥಳಕ್ಕೆ ಬಂದು ಕರೆದುಕೊಂಡು ಹೋಗುತ್ತೇನೆ. ಎಲ್ಲಿರುತ್ತೀರಿ. ಹೇಳಿ ” ಎಂದು ಹೇಳುತ್ತಾರೆ. ಆದರೆ ಆ ಬಳಿಕ ಕರೆ ಮಾಡಿದವರ ಫೋನ್ ಸ್ವಿಚ್ ಆಫ್‌ ಆಗುತ್ತದೆ.


ಈ ರೀತಿಯಲ್ಲಿಯೂ ಜನರನ್ನು ಯಾಮಾರಿಸಿ ಹಣ ಮಾಡುವ ತಂಡವೊಂದು ತೊಡಗಿಕೊಂಡಿರುವುದು ಬೆಳಕಿಗೆ ಬಂದಿದೆ. ಸಾರ್ವಜನಿಕರು ಇಂತಹ‌ ಕರೆಗಳು‌ ಬಂದರೆ ಎಚ್ಚರ ವಹಿಸುವ ಅಗತ್ಯವಿದೆ.