ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಬಸವನಮೂಲ ಬಸವೇಶ್ವರ ದೇವಸ್ಥಾನದಲ್ಲಿ ಮಹಾರುದ್ರ ಯಾಗ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಕುಲ್ಕುಂದ ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಕೊನೆಯ ಸೋಮವಾರ ನ.25 ರಂದು ದೇವರಿಗೆ ವಿಶೇಷವಾಗಿ ಮಹಾರುದ್ರ ಯಾಗವು ನಡೆಯಿತು.


ಶಿವರಾಮ ಭಟ್ ತಂತ್ರಿಯವರು ಮತ್ತು ಸದಾಶಿವ ಭಟ್ ಎಡಮಂಗಲ ರವರ ನೇತೃತ್ವದಲ್ಲಿ ವಿಶೇಷ ಮಹಾರುದ್ರಯಾಗವು ಬೆಳಗ್ಗೆ ಆರಂಭಗೊಂಡು ಮಧ್ಯಾಹ್ನ ಪೂರ್ಣಾಹುತಿಯಾಗಿ ಸಮಾಪನಗೊಂಡಿತು. ಪುರೋಹಿತರಿಂದ ಏಕಕಾಲದಲ್ಲಿ ಸಾಮೂಹಿಕವಾಗಿ 1333 ರುದ್ರ ಪಠಣವನ್ನು ಪಾರಾಯಣ ಮಾಡುವುದರೊಂದಿಗೆ ದೇವರಿಗೆ ಸಮರ್ಪಣೆ ಮಾಡಲಾಯಿತು. ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.


ಈ ಸಂದರ್ಭದಲ್ಲಿ ಭಗವತಿ ಸೇವೆ, ಸಹಸ್ರ ಮೋದಕ ಹವನ, ಶತ ರುದ್ರಾಭಿಷೇಕ ಮುಂತಾದ ವಿಶೇಷ ಸೇವೆಗಳನ್ನು ಭಕ್ತರು ದೇವರಿಗೆ ಸಮರ್ಪಿಸಿದರು. ಭಕ್ತರಿಂದ ಯಾಗಕ್ಕೆ ಬೇಕಾದ ಎಳ್ಳು, ಭತ್ತ, ತುಪ್ಪ ಮುಂತಾದ ವಸ್ತು ರೂಪದ ಕಾಣಿಕೆಯನ್ನು ಸಮರ್ಪಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಗಿರಿಧರ ಸ್ಕಂದ ಹಾಗೂ ಸಮಿತಿಯ ಸದಸ್ಯರು, ಸ್ಥಳೀಯ ಭಕ್ತಾದಿಗಳು ಭಾಗವಹಿಸಿದರು.