ಸುಳ್ಯ ಕೆ.ವಿ.ಜಿ. ಕಾನೂನು ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

0

ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯ ಸುಳ್ಯ ಹಾಗೂ ಅಧಿವಕ್ತ ಪರಿಷತ್ ದ ಕ ಜಿಲ್ಲೆ ಸುಳ್ಯ ಘಟಕ ಇದರ ಸಹಯೋಗದೊಂದಿಗೆ ನ.26ರಂದ ಕೆವಿಜಿ ಕಾನೂನು ಕಾಲೇಜು ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಶುಪಾಲರಾದ ಡಾ. ಉದಯಕೃಷ್ಣ. ಬಿ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕೆವಿಜಿ ಕಾನೂನು ಕಾಲೇಜಿನ ಸಲಹೆಗಾರ ಹೇಮನಾಥ ಕೆ ವಿ ಅವರು ನೆರವೇರಿಸಿದರು. ಸಂಪನ್ಮೂಲ ವ್ಯಕ್ತಿ ಸುಬ್ರಹ್ಮಣ್ಯ ಅಘರ್ಥ ಹಿರಿಯ ನ್ಯಾಯವಾದಿಗಳು ಬೆಳ್ತಂಗಡಿ ಇವರು”ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ನಡುವಿನ ಗಮನರ್ಹ ಸಮತೋಲನ ಎಂಬ ವಿಷಯದ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊ ಕೆ.ವಿ. ದಾಮೋದರ ಗೌಡ ಆಡಳಿತಧಿಕಾರಿ, ಕೆವಿಜಿ ಕಾನೂನು ಮಹಾವಿದ್ಯಾಲಯ, ಸುಕುಮಾರ ಕೊಡ್ತುಗುಳಿ ಅಧ್ಯಕ್ಷರು ವಕೀಲರ ಸಂಘ ಸುಳ್ಯ, ಜಗದೀಶ್ ಡಿ.ಪಿ ಉಪಾಧ್ಯಕ್ಷರು ಅಧಿವಕ್ತ ಪರಿಷತ್ ದಕ ಜಿಲ್ಲೆ, ದಿಲೀಪ್ ಬಾಬ್ಲಬೆಟ್ಟು ಅಧ್ಯಕ್ಷರು ಅದಿವಕ್ತ ಪರಿಷತ್ ಸುಳ್ಯ ಘಟಕ, ಶ್ರೀಮತಿ ಟೀನಾ ಹಚ್ ಎಸ್ ಉಪನ್ಯಾಸಕಿ ಕೆವಿಜಿ ಕಾನೂನು ಮಹಾವಿದ್ಯಾಲಯ ಸುಳ್ಯ ಸಂವಿಧಾನ ದಿನಾಚರಣೆಯ ಪ್ರಯುಕ್ತ ಕಾನೂನು ಕಾಲೇಜಿನ ವಿದ್ಯಾರ್ಥಿ ಗಳಿಗೆ ಸಂವಿಧಾನದ ವಿಧಿಗಳ ಚಿತ್ರಣಗಳನ್ನು ಪ್ರದರ್ಶಿಸುವ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.


ನ್ಯಾಯವಾದಿ ಸುಮಾ ಕೆ ಎಸ್ ಪ್ರಾರ್ಥಿಸಿ ನ್ಯಾಯವಾದಿ ದಿಲೀಪ್ ಬಾಬ್ಲಬೆಟ್ಟು ಸ್ವಾಗತಿಸಿದರು. ಕೆವಿಜಿ ಕಾನೂನು ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಟೀನಾ ಹೆಚ್ ಎಸ್ ವಂದಿಸಿದರು. ಉಪನ್ಯಾಸಕಿ ನಯನ ಪಿ ಯು ಕಾರ್ಯಕ್ರಮ ನಿರೂಪಿಸಿದರು.