ಸುಳ್ಯದ ಪೈಚಾರಿನಲ್ಲಿ ನ. ೩೦ ರಂದು ರಾತ್ರಿ ಸಂಭವಿಸಿದ ಹೋಟೆಲ್ ಕಳ್ಳತನಕ್ಕೆ ಸಂಬಂಧಿಸಿದಂತೆ ಕಳ್ಳತನದ ಸಿಸಿಟಿವಿ ದೃಶ್ಯ ಲಭಿಸಿದೆ.
ಹೋಟೆಲ್ನಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಕಳ್ಳನ ಮುಖ ಹಾಗೂ ಆತನ ಚಲನ ವಲನದ ದೃಶ್ಯ ದೊರಕಿದೆ. ಸುಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದು, ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.