ಬ್ಯಾಂಡ್ ವಾಲಗದ ಅಬ್ಬರದೊಂದಿಗೆ ಬ್ರಹ್ಮರಥಾರೂಢನಾದ ಸುಬ್ರಮಣ್ಯ ದೇವರು
ಕಣ್ತುಂಬಿಕೊಂಡ ಸಹಸ್ರಾರು ಮಂದಿ ಭಕ್ತಾದಿಗಳು
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಭ್ರಮದ ಚಂಪಾಷಷ್ಠಿ ಮಹೋತ್ಸವ ಕಾರ್ಯಕ್ರಮ ಇಂದು ಬೆಳಿಗ್ಗೆ 6.57ರ ವೃಶ್ಚಿಕ ಲಗ್ನದ ಶುಭ ಮುಹೂರ್ತದಲ್ಲಿ ಸಹಸ್ರಾರು ಜನ ಸಮೂಹದ ಮಧ್ಯೆ ಕುಕ್ಕೆ ಸುಬ್ರಹ್ಮಣ್ಯ ದೇವರು ಬ್ರಹ್ಮ ರಥವನ್ನೇರಿದರು. ಬ್ರಹ್ಮರಥರೂಢರಾದ ಸುಬ್ರಹ್ಮಣ್ಯ ದೇವರು ರಾಜ ಗೋಪುರದ ಬಳಿಯಿಂದ ಹೊರಟು ರಾಜಬೀದಿಯಲ್ಲಿ ಸಾಗಿ ಬಂತು.
ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ಬ್ರಹ್ಮರಥೋತ್ಸವವನ್ನು ಕಣ್ತುಂಬಿಕೊಳ್ಳುವ ಮೂಲಕ ಕೃತಾರ್ಥರಾದರು.
ಭಕ್ತರು ದೇವರ ಮಹಾರಥವನ್ನು ಎಳೆದರು.
ಬ್ರಹ್ಮರಥವು ರಾಜಗಾಂಭೀರ್ಯದಿಂದ ಅತ್ಯಂತ ಸಲೀಸಾಗಿ, ಆಕರ್ಷಕವಾಗಿ ರಥಬೀದಿಯಲ್ಲಿ ಮುನ್ನಡೆಯಿತು.
ನಿನ್ನೆ ರಾತ್ರಿ ಪಂಚಮಿ ರಥೋತ್ಸವ ನಡೆಯಿತು.
ಕಾರ್ಯಕ್ರಮವು ಸುದ್ದಿ ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರವಾಗುತ್ತಿದೆ. ನೇರ ಪ್ರಸಾರವನ್ನು ವೀಕ್ಷಿಸಲು ಈ ಲಿಂಕನ್ನು ಕ್ಲಿಕ್ಕಿಸಿ…..