ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ : ಇಬ್ಬರ ಬಂಧನ – ಪ್ರಕರಣ ದಾಖಲು

0

ಸವಣೂರಿನ ಮಾಂತೂರು ಬಳಿ ಮತ್ತು ಶಾಂತಿನಗರ ಮೆಸ್ಕಾಂ ಬಳಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ಇಬ್ಬರನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.


ಮಹಮ್ಮದ್ ಫೈಝೀಲ್ ಮತ್ತು ಮಜೀದ್ ಕಡಬ ಎಂಬವರನ್ನು ಬಂಧಿಸಿದ್ದು ಇಬ್ಬರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವನೆ ಮಾಡಿದ್ದು ದೃಢಪಟ್ಟಿದ್ದು ಇವರಿಬ್ಬರ ಮೇಲೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.