ಈ ರೀತಿಯ ದೂರವಾಣಿ ಕರೆ ನಿಮಗೂ ಬರಬಹುದು ಎಚ್ಚರ!

0

ಪೊಲೀಸ್ ಅಧಿಕಾರಿಯ ಪ್ರೊಫೈಲ್ ಫೋಟೋ ಇರುವ ನಂಬರ್ ನಿಂದ ಕರೆ

ಮಗ ಡ್ರಗ್ಸ್ ಮಾಫಿಯಾದಲ್ಲಿದ್ದಾನೆ ಎಂದು ತಿಳಿಸಿ ಹಣಕ್ಕಾಗಿ ಬೇಡಿಕೆ

ಸುಳ್ಯದ ಹಳೆಗೇಟಿನಲ್ಲಿ ನಡೆದ ಘಟನೆ

ಪೊಲೀಸ್ ಅಧಿಕಾರಿಯ ಪ್ರೊಫೈಲ್ ಫೋಟೋ ಬಳಸಿ ನಿಮ್ಮ ಮಗ ಡ್ರಗ್ಸ್ ದಂಧೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ ಅದನ್ನು ಸರಿಪಡಿಸಲು ಹಣ ನೀಡಬೇಕು ಎಂಬ ಬೇಡಿಕೆ ಇಟ್ಟು ಅನಾಮಿಕ ವ್ಯಕ್ತಿಯೋರ್ವ ಕರೆ ಮಾಡಿದ ಘಟನೆ ಸುಳ್ಯದ ಹಳೆಗೇಟು ಬಳಿ ನಡೆದಿದೆ.

ಸುಳ್ಯದ ಹಳೆಗೇಟು ಆಟೋ ಚಾಲಕ ಜಲೀಲ್ ಎಂಬುವರಿಗೆ ಇಂದು ಮಧ್ಯಾಹ್ನದ ವೇಳೆ ದೂರವಾಣಿ ಕರೆಯೊಂದು ಬಂದಿದೆ.
ಮೊಬೈಲ್ ನಲ್ಲಿ ವಾಟ್ಸ್ ಆಪ್ ಕರೆ ಮಾಡಿದ ವ್ಯಕ್ತಿ ನಿಮ್ಮ ಹೆಸರು ಜಲೀಲ್ ಅಲ್ಲವೇ? ನಿಮ್ಮ ಮಗ ಅವನ ಹೆಸರನ್ನು ಹೇಳಿ ಅವನು ಡ್ರಗ್ಸ್ ದಂಧೆಯಲ್ಲಿ ಇದ್ದಾನೆ ಎಂದು ಹೇಳಿ ಕರೆ ಕಟ್ ಮಾಡಿರುತ್ತಾರೆ.

ಬಳಿಕ ಮತ್ತೆ 1 ಗಂಟೆ ಬಳಿಕ ಅದೇ ವ್ಯಕ್ತಿ ಮತ್ತೆ ಫೋನ್ ಮಾಡಿ ಈ ಪ್ರಕರಣದಿಂದ ಸರಿಪಡಿಸಲು ಹಣ ಬೇಕಾಗಿದೆ ಎಂಬ ಬೇಡಿಕೆಯನ್ನು ಇಡುತ್ತಾರೆ.

ಆದರೆ ಜಲೀಲ್ ರವರಿಗೆ ಹಿಂದಿ ಮಾತನಾಡಲು ಬಾರದ ಕಾರಣ ಅವರು ಸಂಕ್ಷಿಪ್ತವಾಗಿ ಮಾತನಾಡದೆ ಕರೆಯನ್ನು ಇಲ್ಲಿಂದ ಕಟ್ ಮಾಡಿರುತ್ತಾರೆ.

ಆದರೆ ಜಲೀಲ್ ರವರ ಮಗ ಸುಳ್ಯದಲ್ಲಿ ಕಾಲೇಜು ವಿದ್ಯಾರ್ಥಿ ಯಾಗಿದ್ದು ರಜೆ ಇರುವ ಕಾರಣ ಮನೆಯಲ್ಲಿ ಇರುತ್ತಾರೆ.

ಈ ಅನಾಮಿಕ ವ್ಯಕ್ತಿಯ ಕರೆಯನ್ನು ನೋಡಿ ಸಂಶಯಗೊಂಡು ಕರೆ ಬಂದ ನಂಬರ್ ನ ಪ್ರೊಫೈಲ್ ಓಪನ್ ಮಾಡಿ ನೋಡಿದಾಗ ಅದರಲ್ಲಿ ಪೊಲೀಸ್ ಅಧಿಕಾರಿ ಇರುವ ಫೋಟೋವನ್ನು ಕಂಡುಬಂದಿದೆ.

ಇದೇ ರೀತಿಯ ಘಟನೆ ಕಳೆದ ಕೆಲವು ದಿನಗಳ ಹಿಂದೆ ಸುಳ್ಯದಲ್ಲಿ ಬೇರೆ ಕಡೆಯೂ ಆಗಿರುತ್ತದೆ ಎಂದು ಕೇಳಿಬಂದಿದೆ. ಆದ್ದರಿಂದ ಸಾರ್ವಜನಿಕರು ಎಚ್ಚರ ವಹಿಸಬೇಕಾಗಿದೆ ಈ ರೀತಿಯ ಕರೆ ಬಂದಲ್ಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಇರ ಬೇಕಾಗಿದೆ.