ಸುಳ್ಯ ರಾಮಮಂದಿರದಲ್ಲಿಸಾರ್ವಜ ನಿಕ ಶ್ರೀ ದುರ್ಗಾ ಪೂಜೆ

0

ಸುಳ್ಯ ಶ್ರೀ ರಾಮ ಪೇಟೆಯ ಶ್ರೀ ರಾಮ ಮಂದಿರದಲ್ಲಿ ಅರ್ಧ ಏಕಾಹ ಭಜನೆಯ ಅಂಗವಾಗಿ ಡಿ.11 ರಂದು ರಾತ್ರಿ ವಿಶೇಷವಾಗಿ ಸಾರ್ವಜನಿಕ ಶ್ರೀ ದುರ್ಗಾಪೂಜೆಯು ನೆರವೇರಿತು.

ಬ್ರಹ್ಮಶ್ರೀ ವೇದಮೂರ್ತಿ ಪುರೋಹಿತ ನಾಗರಾಜ್ ಭಟ್ ರವರ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಯಿತು. ಅರ್ಚಕರಾದ ಸುದರ್ಶನ ಭಟ್ ಹಾಗೂ ಹರ್ಷಕೃಷ್ಣ ಭಟ್ ರವರು ಸಹಕರಿಸಿದರು.

ಆಡಳಿತ ಧರ್ಮದರ್ಶಿ ಗಳಾದ ಕೆ.ಉಪೇಂದ್ರ ಪ್ರಭು ದಂಪತಿ ಪೂಜೆಯಲ್ಲಿ ಪಾಲ್ಗೊಂಡರು.


ಈ ಸಂದರ್ಭದಲ್ಲಿ
ಸೇವಾ ರೂಪದಲ್ಲಿ ದುರ್ಗಾ ಪೂಜೆಯನ್ನು ಮಾಡಿಸಿದ ಭಕ್ತಾದಿಗಳಿಗೆ ಅರ್ಚಕರಿಂದ ಸಂಕಲ್ಪ ನೆರವೇರಿಸಿ ಪ್ರಸಾದ ವಿತರಿಸಲಾಯಿತು.
ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ರಾತ್ರಿ ಅನ್ನ ಸಂತರ್ಪಣೆಯಾಯಿತು.
ಆಡಳಿತ ಧರ್ಮದರ್ಶಿ ಮಂಡಳಿಯ ಪದಾಧಿಕಾರಿಗಳು ಮತ್ತು ‌ಸದಸ್ಯರು ಮತ್ತು ಶ್ರೀ ರಾಮ ಸಾಂಸ್ಕೃತಿಕ ಸೇವಾ ಸಮಿತಿಯ ಪದಾಧಿಕಾರಿಗಳು ಮತ್ತು ‌ಸದಸ್ಯರು ಸಹಕರಿಸಿದರು.