18 ಮಂದಿಯಿಂದ ನಾಮಪತ್ರ ಸಲ್ಲಿಕೆ
ಸುಳ್ಯ ತಾಲೂಕು ಕೃಷಿ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಡಿ.15ರಂದು ಚುನಾವಣೆ ನಡೆಯಲಿದ್ದು ಸಮಿತಿಯ 15 ಸ್ಥಾನಗಳಿಗೆ 18 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಡಿ.6 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು ಕೆ.ಸುಧಾಕರ ಪ್ರಭು, ಹರಿಪ್ರಸಾದ್, ಎ.ಟಿ.ಕುಸುಮಾಧರ, ಎ.ಶರತ್‌ಕುಮಾರ್, ಎ.ಎಸ್.ಮನ್ಮಥ, ಎ.ಉಮಾನಾಥ, ಶ್ಯಾಮ ಪ್ರಸಾದ್, ಚಂದ್ರಾ ಕೋಲ್ಚಾರ್, ನಾರಾಯಣ ಗೌಡ, ಕೆ.ಅಶೋಕ ಪ್ರಭು, ಸವಿನ್ ಕೆ.ಬಿ., ಕರುಣಾಕರ ಎ.ಎಸ್., ರುಕ್ಮಯ್ಯಗೌಡ, ಕುಮಾರಸ್ವಾಮಿ, ಎಂ.ಬಿ.ಸದಾಶಿವ, ಅಣ್ಣಾಜಿಗೌಡ, ಲೋಕೇಶ್, ಕೆ.ಎಸ್. ಮಹೇಶ್ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ವಾಪಸು ಪಡೆಯಲು ಡಿ.9 ಕೊನೆಯ ದಿನವಾಗಿದೆ.
ಕೃಷಿ ಸಹಾಯಕ ನಿರ್ದೇಶಕರಾದ ಗುರುಪ್ರಸಾದ್ ಚುನಾವಣಾಧಿಕಾರಿಯಾಗಿರುತ್ತಾರೆ.