ಬೆಳ್ಳಾರೆ – ದರ್ಖಾಸ್ತು ರಸ್ತೆ ಅಗಲೀಕರಣ ಮತ್ತು ಡಾಮರೀಕರಣಕ್ಕೆ ಗುದ್ದಲಿ ಪೂಜೆ

0

ಬೆಳ್ಳಾರೆ – ದರ್ಖಾಸ್ತು ರಸ್ತೆ ಅಗಲೀಕರಣ ಮತ್ತು ಡಾಮರೀಕರಣಕ್ಕೆ ಗುದ್ದಲಿ ಪೂಜೆಯು ಡಿ.09 ರಂದು ಬೆಳ್ಳಾರೆಯಲ್ಲಿ ನಡೆಯಿತು.
ಶಾಸಕಿ ಭಾಗೀರಥಿ ಮುರುಳ್ಯರವರು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ಆದಷ್ಟು ಬೇಗ ರಸ್ತೆ ಕಾಮಗಾರಿ ಮುಗಿಯುವಂತೆ ಮತ್ತು ರಸ್ತೆ ಬದಿಯ ಮನೆಯವರು ರಸ್ತೆ ಅಗಲೀಕರಣ ಸಂದರ್ಭದಲ್ಲಿ ಸಹಕಾರ ನೀಡಬೇಕು ಎಂದು ಹೇಳಿದರು.


ಬೆಂಗಳೂರು ರಾಜ್ಯ ಹೆದ್ದಾರಿ ಅಭಿವೃದ್ಧಿ ಘಟಕದ ರೂ.10 ಕೋಟಿ ವೆಚ್ಚದಲ್ಲಿ ರಸ್ತೆ ಅಗಲೀಕರಣ ಮತ್ತು ಡಾಮರೀಕರಣ ನಡೆಯಲಿದ್ದು
ರಸ್ತೆ 7 ಮೀಟರ್ ಅಗಲವಾಗಲಿದೆ .ಮಂಗಳೂರಿನ ಟಿ.ಆರ್.ಕನ್ ಸ್ಟ್ರಕ್ಷನ್ ನವರು ಕಾಂಟ್ರಾಕ್ಟರ್ ಆಗಿದ್ದು ಇನ್ನು ಕೆಲವೇ ದಿನದಲ್ಲಿ ಕೆಲಸ ಪ್ರಾರಂಭವಾಗಲಿದೆ.


ಈ ಸಂದರ್ಭದಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತಾ ಎಲ್.ರೈ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯ.ಸ.ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಪದ್ಮನಾಭ ಬೀಡು,ಶ್ರೀನಾಥ್ ರೈ ಬಾಳಿಲ, ಗಂಗಾಧರ ರೈ ಪುಡ್ಕಜೆ,ಬಾಳಿಲ ಗ್ರಾ.ಪಂ.ಸದಸ್ಯ ಶ್ರೀನಾಥ ರೈ ಬಾಳಿಲ, ಗ್ರಾ.ಪಂ.ಸದಸ್ಯರಾದ ದಿನೇಶ್ಚಂದ್ರ, ಭವ್ಯ , ಶೇಖರ ಮಡ್ತಿಲ,ನಂದಕುಮಾರ್ ಬಾರೆತ್ತಡ್ಕ,ಕಿಶನ್ ಜಬಳೆ,ಆರೀಫ್ ಬೆಳ್ಳಾರೆ, ಕುಶಾಲಪ್ಪ ಪೆರುವಾಜೆ,ಮಹಾಬಲ ಕಲ್ಲೋಣಿ,ಶ್ರೀಧರ್ ಬೆಳ್ಳಾರೆ,
ಪಿಡಬ್ಲ್ಯೂ ಎ.ಇ.ಇ.ಗೋಪಾಲ್, ಎ.ಇ. ಪರಮೇಶ್ವರ್, ಕಾಂಟ್ರಾಕ್ಟರ್, ಶಾಂತಾರಾಮ ಕಣಿಲೆಗುಂಡಿ,ವಸಂತ ನಡುಬೈಲು, ಪ್ರಭಾಕರ ಕುತ್ಯಾಡಿ,ಜಯರಾಮ ಉಮಿಕ್ಕಳ, ಶ್ರೀಧರ ದೊಡ್ಡಮನೆ ಹಾಗೂ ಬೆಳ್ಳಾರೆ ರಿಕ್ಷಾ ಚಾಲಕರು,ಗ್ರಾಮಸ್ಥರು ಉಪಸ್ಥಿತರಿದ್ದರು.
ಅಜಿತ್ ರಾವ್ ಕಿಲಂಗೋಡಿ ಕಾರ್ಯಕ್ರಮ ನಿರೂಪಿಸಿ, ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ ಪನ್ನೆ ಸ್ವಾಗತಿಸಿ,ವಂದಿಸಿದರು.