ಆಲೆಟ್ಟಿ ಗುಂಡ್ಯ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ವರ್ಷಂಪ್ರತಿ ಜರುಗುವ ಪುದಿಯೊಡ್ಕಲ್ ಕಾರ್ಯಕ್ರಮವು ಡಿ.16 ರಂದು ನಡೆಯಿತು.
ದೈವದ ದರ್ಶನ ಪಾತ್ರಿಯವರಿಂದ ದರ್ಶನ ಸೇವೆ ನಡೆದು ಪ್ರಸಾದ ವಿತರಣೆಯಾಯಿತು.
ದೈವಸ್ಥಾನದ ಅಧ್ಯಕ್ಷರಾದ ಶಿವರಾಮ ರೈ ಗುಂಡ್ಯ, ಶಿವದಾಸ ರೈ ಗುಂಡ್ಯ,
ಗುಂಡ್ಯ ಉಳ್ಳಾಕುಲು ದೈವಸ್ಥಾನದ ಅಧ್ಯಕ್ಷ ಅಶೋಕ ಪ್ರಭು ಸುಳ್ಯ ಹಾಗೂ ಸ್ಥಳೀಯ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ
ಭಾರತೀಯ ತೀಯ ಸಮಾಜ ಬಾಂಧವರು ಸಹಕರಿಸಿದರು. ಆಗಮಿಸಿದ ಎಲ್ಲರಿಗೂ ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.