12 ಮಂದಿ ನಿರ್ದೇಶಕ ಸ್ಥಾನಕ್ಕೆ 40 ಮಂದಿ ನಾಮಪತ್ರ ಸಲ್ಲಿಕೆ
ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಚುನಾವಣೆಯು ಡಿ.25 ರಂದು ನಡೆಯಲಿದ್ದು ಬಿಜೆಪಿ,ಕಾಂಗ್ರೆಸ್ ಬೆಂಬಲಿತ 40 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಡಿ.19 ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕವಾಗಿದ್ದು ಯಾರೆಲ್ಲ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದುಕೊಳ್ಳುತ್ತಾರೆ ಎಂದು ಕಾದುನೋಡಬೇಕಾಗಿದೆ.
ಸಾಮಾನ್ಯ ಕ್ಷೇತ್ರಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಅನಿಲ್ ರೈ ಚಾವಡಿಬಾಗಿಲು,ಕರುಣಾಕರ ಆಳ್ವ, ರಮೇಶ್ ಮಾರ್ಲ,ವಿಠಲದಾಸ್ ಎನ್.ಎಸ್.ಡಿ, ಪ್ರಮೋದ್ ಶೆಟ್ಟಿ ಕುಂಟುಪುಣಿಗುತ್ತು, ನಿತಿನ್ ರಾಜ್ ಶೆಟ್ಟಿ,ಕಿಶೋರ್ ಪೆರುವಾಜೆ ನಾಮಪತ್ರ ಸಲ್ಲಿಸಿದ್ದಾರೆ.
ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಸುನಿಲ್ ರೈ ಪುಡ್ಕಜೆ,ಹಿಂದುಳಿದ ವರ್ಗ ಎ ಸ್ಥಾನಕ್ಕೆ ಬಶೀರ್ ಅಹಮ್ಮದ್ , ಮಹಮ್ಮದ್ ಮುಸ್ತಫಾ, ಪರಿಶಿಷ್ಟ ಜಾತಿ ಸ್ಥಾನಕ್ಕೆ ಲಕ್ಷ್ಮಣ,ಆನಂದ ಬೆಳ್ಳಾರೆ,ರಾಮ ಯು .ಪೆರುವಾಜೆ,ಪರಿಶಿಷ್ಟ ಪಂಗಡಕ್ಕೆ ಚಂದ್ರಶೇಖರ ಪೆಲತ್ತಡ್ಕ,ಮಹಿಳಾ ಸ್ಥಾನಕ್ಕೆ ಶಾರದಾ ರೈ ಕೊರಂಗಾಜೆ , ನಿರ್ಮಲ ರೈ ಕೆಡೆಂಜಿಮೊಗ್ರು, ಸಾವಿತ್ರಿ ಚಾಮುಂಡಿಮೂಲೆ ನಾಮಪತ್ರ ಸಲ್ಲಿಸಿದ್ದಾರೆ.
ಸಾಮಾನ್ಯ ಕ್ಷೇತ್ರಕ್ಕೆ ಬಿಜೆಪಿ ಬೆಂಬಲಿತರಾದ
ಪದ್ಮನಾಭ ಶೆಟ್ಟಿ ಪೆರುವಾಜೆ,
ದಯಾಕರ ಆಳ್ವ ಪೆರುವಾಜೆ,
ನಾರಾಯಣ ಕೊಂಡೆಪ್ಪಾಡಿ, ರಾಮಕೃಷ್ಣ ಭಟ್ ಕುರುಂಬುಡೇಲು, ಜನಾರ್ದನ(ಹೊನ್ನಪ್ಪ) ಗೌಡ ಆರ್ವಾರಕೊಡಿಯಾಲ, ಸಾಯಿಪ್ರಸಾದ್ ರೈ ಕೊಡಿಯಾಲ,
ನಾಮಪತ್ರ ಸಲ್ಲಿಸಿದರು.
ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ
ಭಾರತಿ ಕೊಚ್ಚಿ ಬೆಳ್ಳಾರೆ,
ವನಿತಾ ಸಾರಕರೆ ಕೊಡಿಯಾಲ,
ಸಾಮಾನ್ಯ ‘ಎ’ ಸ್ಥಾನಕ್ಕೆ
ವಾಸುದೇವ ನಾಯಕ್ ಮೂಡಾಯಿತೋಟ,
‘ಬಿ’ ಸ್ಥಾನಕ್ಕೆ
ಭಾಸ್ಕರ ನೆಟ್ಟಾರು,
‘ಪರಿಶಿಷ್ಟ ಜಾತಿ ಸ್ಥಾನಕ್ಕೆ
ಬಿಯಾಳು ಬೇರ್ಯ ಕೊಡಿಯಾಲ,
ಪರಿಶಿಷ್ಟ ಪಂಗಡ ಸ್ಥಾನಕ್ಕೆ
ಸುಂದರ ನಾಗನಮಜಲು ಇವರು ನಾಮಪತ್ರ ಸಲ್ಲಿಸಿದರು.
ಹಿಂದುಳಿದ ವರ್ಗ ಎ ಸ್ಥಾನಕ್ಕೆ ಬಿಜೆಪಿಯ ಚಂದ್ರಶೇಖರ ಪನ್ನೆ, ಸಾಮಾನ್ಯ ಕ್ಷೇತ್ರಕ್ಕೆ ಐತ್ತಪ್ಪ ರೈ ಅಜ್ರಂಗಳ ರವರು ನಾಮಪತ್ರ ಸಲ್ಲಿಸಿದರು.
ಸಾಮಾನ್ಯ ಕ್ಷೇತ್ರಕ್ಕೆ ಶ್ರೀರಾಮ ಪಾಟಾಜೆ, ಮಂಜಪ್ಪ ರೈ ಬೆಳ್ಳಾರೆ,
ಹಿಂದುಳಿದ ವರ್ಗ ಎ ಸ್ಥಾನಕ್ಕೆ ಮಾಧವ ತಡಗಜೆ, ಸಂಜಯ್ ನೆಟ್ಟಾರು, ಪರಿಶಿಷ್ಟ ಜಾತಿ ಸ್ಥಾನಕ್ಕೆ ಮುದ್ದ ರವರು ನಾಮಪತ್ರ ಸಲ್ಲಿಸಿದ್ದಾರೆ. ಮಂಗಳೂರು ಸಹಕಾರಿ ಸಂಘದ ಸಹಾಯಕ ನಿಬಂಧಕ ಶಿವಲಿಂಗಯ್ಯರವರು ಚುನಾವಣಾಧಿಕಾರಿಯಾಗಿದ್ದು ನಾಮಪತ್ರ ಸ್ವೀಕರಿಸಿದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯ ರೈ ಸಹಕರಿಸಿದರು.