ಸುಳ್ಯ ಶ್ರೀ ಶಾರದಾಂಬ ದಸರಾ ಮಹೋತ್ಸವದ ಲೆಕ್ಕಪತ್ರ ಮಂಡನಾ ಸಭೆ

0

ದಸರಾ ಮಹೋತ್ಸವದ ಯಶಸ್ವಿಗೆ S6 ನ ಸರ್ವ ಪದಾಧಿಕಾರಿಗಳ ಸದಸ್ಯರ ಶ್ರಮದ ಫಲವಾಗಿದೆ : ಮುಖಂಡರ ಒಮ್ಮತದ ಮಾತು

ಸುಳ್ಯದ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿಯ ವತಿಯಿಂದ ನಡೆದ ಸುಳ್ಯ ದಸರಾ – 2024 ಲೆಕ್ಕಪತ್ರ ಮಂಡನೆಯು ಡಿ.17ರಂದು ತಾಲೂಕು ಪಂಚಾಯತಿ ಸಭಾಭವನದಲ್ಲಿ ನಡೆಯಿತು.

ದಸರಾ ಸಮೂಹ ಸಮಿತಿಯ ಸರ್ವ ಪದಾಧಿಕಾರಿಗಳ ಮತ್ತು ಸರ್ವ ಸದಸ್ಯರ ಅವಿರತ ಶ್ರಮದ ಫಲದಿಂದ ಸುಳ್ಯ ದಸರಾ ಹಬ್ಬ ಯಶಸ್ವಿಯಾಗಿದೆ. ಅಲ್ಲದೆ ಬಹು ಮುಖ್ಯವಾಗಿ ಸಮಿತಿಯ ಮುಂಚೂಣಿ ನಾಯಕರ ಪರಿಪೂರ್ಣ ಪ್ರೋತ್ಸಾಹ ಮತ್ತು ಸಹಕಾರದಿಂದ ಈ ಭಾರಿಯ ಮಹೋತ್ಸವ ಜನರ ಮನಸ್ಸಿನಲ್ಲಿ ನಿಲ್ಲುವಂತಾಗಿದೆ ಎಂದು ಮುಖಂಡರುಗಳು ಮಾತನಾಡಿ ಸಂತಷ ವ್ಯಕ್ತ ಪಡಿಸಿದರು.

35.96 ಲಕ್ಷ ರೂಗಳ ಜಮಾ ಮತ್ತು 35.34 ಲಕ್ಷ ರೂ ಗಳ ಖರ್ಚು ವೆಚ್ಚದ ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಮಾಡಲಾಯಿತು.

ಸಭೆಯಲ್ಲಿ ದಸರಾ ಹಬ್ಬದ ವೈಭವ ಮೆರವಣಿಗೆಯಲ್ಲಿ ಭಾಗವಹಿಸಿದ ಎಲ್ಲಾ ಸ್ತಬ್ದ ಚಿತ್ರಗಳ ಸಮಿತಿಗೆ ಸ್ಮರಣಿಕೆ ನೀಡಿ ಪ್ರೋತ್ಸಾಹಿಸಲಾಯಿತು.

ಇದೇ ಸಂಧರ್ಭ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಮಿತಿಯ ಗೌರವ ಅಧ್ಯಕ್ಷರಾದ ಕೆ ಗೋಕುಲ್ ದಾಸ್ ರವರಿಗೆ ಜಂಟಿ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.

ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಮಿತಿಯ ಗೌರವ ಅಧ್ಯಕ್ಷರುಗಳಾದ ಕೃಷ್ಣ ಕಾಮತ್,ಡಾ. ಡಿ ವಿ ಲೀಲಾಧರ್, ಮಹಿಳಾ ಸಮಿತಿ ಅಧ್ಯಕ್ಷೆ ಶಶಿಕಲಾ ಎ ನೀರಬಿದಿರೆ,ಗೌರವ ಸಲಹೆ ಗಾರರಾದ ಎಂ ವೆಂಕಪ್ಪ ಗೌಡ,ಎನ್ ಜಯ ಪ್ರಕಾಶ್ ರೈ,ಸಮಿತಿ ಪ್ರ ಕಾರ್ಯದರ್ಶಿಗಳಾದ ಬೂಡು ರಾಧಾಕೃಷ್ಣ ರೈ,ಎಂ ಕೆ ಸತೀಶ್,ಸುನಿಲ್ ಕೇರ್ಪಳ,ಕೋಶಾಧಿಕಾರಿ ಅಶೋಕ್ ಪ್ರಭು, ಗಣೇಶ್ ಆಳ್ವ,ರಾಜು ಪಂಡಿತ್,ಮಹಿಳಾ ಸಮಿತಿ ಶ್ರೀದೇವಿ ನಾಗರಾಜ್ ಭಟ್,ಮೊದಲಾದವರು ಉಪಸ್ಥಿತರಿದ್ದರು.

ಡಾ. ಲೀಲಾಧರ್ ಪ್ರಾಸ್ತವಿಕ ಮಾತನಾಡಿ, ಸುನಿಲ್ ಕೇರ್ಪಳ ಸ್ವಾಗತಿಸಿ, ಗಣೇಶ್ ಆಳ್ವ ಲೆಕ್ಕ ಪತ್ರ ಮಂಡಿಸಿದರು.

ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ ಕಾರ್ಯಕ್ರಮ ನಿರೂಪಿಸಿದರು.