ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕಲಶಾಭಿಷೇಕ ಮತ್ತು ವಿಶೇಷ ಪೂಜೆ

0


ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕಲಶಾಭಿಷೇಕ ಮತ್ತು ವಿಶೇಷ ಪೂಜೆ ಇಂದು ನಡೆಯಿತು.


ಜನವರಿ ತಿಂಗಳಲ್ಲಿ ನಡೆಯುವ ಜಾತ್ರಾ ಪ್ರಯುಕ್ತ ದೇವಸ್ಥಾನದಲ್ಲಿ ಆಗಬೇಕಿದ್ದ ದಾರಂದಕ್ಕೆ ತಾಮ್ರದ ಹೊದಿಕೆ ಮತ್ತು ಇನ್ನಿತರ ಕೆಲಸ ಕಾರ್ಯಗಳು ಮಾಡಬೇಕಾಗಿದ್ದು, ಇದರ ಪ್ರಯುಕ್ತ ತಂತ್ರಿಗಳ ಸಲಹೆ ಮೇರೆಗೆ ಕಲಶಾಭಿಷೇಕ ಮತ್ತು ವಿಶೇಷ ಪೂಜೆ ನಡೆಯಿತು. ಗಣೇಶ್ ತಂತ್ರಗಳ ಮಾರ್ಗದರ್ಶನದಲ್ಲಿ ಗುರುರಾಜ ತಂತ್ರಯವರ ನೇತೃತ್ವದಲ್ಲಿ ಕಲಶಾಭಿಷೇಕ ಮತ್ತು ವಿಶೇಷ ಪೂಜೆ ನಡೆಯಿತು.


ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಚಂದ್ರಕಾಂತ್, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಕೆ. ಉಮೇಶ್, ಸದಸ್ಯರಾದ ಗಿರೀಶ್ ಜಿ.ಎಸ್., ಕುಸುಮಾಧರ ಎ.ಟಿ., ಕೃಷ್ಣ ಬೆಟ್ಟ, ವಿಠಲ ಸರ್ವೆಯರ್, ಸೇವಾ ಸಮಿತಿ ಸಂಚಾಲಕ ನವೀನ ಕುದ್ಪಾಜೆ, ಕಾರ್ತಿಕ ಪೂಜಾ ಸಮಿತಿ ಸಂಚಾಲಕ ಚಂದ್ರಶೇಖರ ಅಡ್ಪಂಗಾಯ, ಕಾರ್ಯದರ್ಶಿ ಬೆಳ್ಯಪ್ಪ ಗೌಡ, ದೇವಸ್ಥಾನದ ಮುಖ್ಯ ಅರ್ಚಕ ನೀಲಕಂಠ ಭಟ್, ಮೆನೇಜರ್ ದೇವಿಪ್ರಸಾದ್ ಉಪಸ್ಥಿತರಿದ್ದರು.