ಆಮಂತ್ರಣ ಬಿಡುಗಡೆ – ವಸಂತ ಸಂಭ್ರಮ ಸಮಿತಿ ಸಭೆ
ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ವಸಂತ ಸಂಭ್ರಮ ಕಾರ್ಯಕ್ರಮವು ಜ.3,4 ಮತ್ತು 5 ರಂದು ನಡೆಯಲಿದ್ದು ಡಿ.20 ರಂದು ಸಮಿತಿ ಸಭೆ ಹಾಗೂ ಆಮಂತ್ರಣ ಬಿಡುಗಡೆಯು ನಡೆಯಿತು.
ಈ ಸಂದರ್ಭದಲ್ಲಿ ವಸಂತ ಸಂಭ್ರಮ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ರೈ ಪನ್ನೆ, ಶಾಲಾ ಎಸ್.ಡಿ.ಎಂ.ಸಿ.ಕಾರ್ಯಾಧ್ಯಕ್ಷ ಶ್ರೀನಾಥ ರೈ ಬಾಳಿಲ, ಕಾಲೇಜಿನ ಪ್ರಾಂಶುಪಾಲರಾದ ಜನಾರ್ದನ ಕೆ.ಎನ್, ಉಪಪ್ರಾಂಶುಪಾಲರಾದ ಉಮಾ ಕುಮಾರಿ, ಮುಖ್ಯ ಶಿಕ್ಷಕ ಮಾಯಿಲಪ್ಪ , ವಸಂತ ಸಂಭ್ರಮದ ವಿವಿಧ ಸಮಿತಿಯ ಸದಸ್ಯರು ಹಾಗೂ ಶಿಕ್ಷಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.