ಸ್ನೇಹದಲ್ಲಿ ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ 300ನೇ ಜಯಂತಿ

0

ಡಿ.20ರಂದು ರಾಷ್ಟ್ರ ಸೇವಿಕಾ ಸಮಿತಿ ಪುತ್ತೂರು ಜಿಲ್ಲೆ, ಇವರ ವತಿಯಿಂದ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜಯಂತಿ ಉತ್ಸವದ ಅಂಗವಾಗಿ ಮಾಹಿತಿ ಕಾರ್ಯಕ್ರಮವು ಜರಗಿತು. ಕಾರ್ಯಕ್ರಮದ ಅಂಗವಾಗಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ನಾಗರಾಜ ಭಟ್ ಜಿಲ್ಲಾ ಸೇವಿಕಾ ಪ್ರಮುಖ್ ಅವರು ಮಾತನಾಡಿ” ಬಾಲ್ಯದಲ್ಲೇ ಆಧ್ಯಾತ್ಮಿಕ ಒಲವನ್ನು ಬೆಳೆಸಿಕೊಂಡ ರಾಜಮಾತೆ ಅಹಲ್ಯಾ ಬಾಯಿ ಹೋಳ್ಕರ್ ಅವರು ತಮ್ಮ ಕ್ರಾಂತಿಕಾರಿ ಚಟುವಟಿಕೆಗಳ ಮೂಲಕ ಪ್ರಸಿದ್ಧಿಯನ್ನು ಹೊಂದಿದವರು. ಇವರು ಭ್ರಷ್ಟಾಚಾರ, ಸತಿ ಸಹಗಮನ ಪದ್ಧತಿ ಮತ್ತು ಡಕಾಯಿತ ತನದ ನಿರ್ಮೂಲನೆಗಾಗಿ ಕ್ರಾಂತಿಕಾರಿ ಹೋರಾಟವನ್ನು ನಡೆಸಿದರು. ಹಾಗೆಯೇ ಅಂಚೆ ವ್ಯವಸ್ಥೆ, ವಿಧವೆಯರಿಗೆ ಪುನರ್ ವಿವಾಹ, ಮತ್ತು ಅಶಕ್ತರಿಗೆ ಸ್ವಸಹಾಯ ಸಂಘವನ್ನು ಪ್ರಾರಂಭಿಸಿದರು. ಕೃಷಿ ಭೂಮಿ ಮತ್ತು ಪ್ರಕೃತಿ ರಕ್ಷಣೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದರು. ಆಕೆಯ ಸರಳ, ತ್ಯಾಗಮಯ ಜೀವನವು ವಿದ್ಯಾರ್ಥಿಗಳಿಗೆ ಪ್ರೇರಣೆ ಆಗಬೇಕು” ಎಂದು ಹೇಳಿದರು.
ನಂತರ ಶಾಲಾ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ ಅವರು “ಅಹಲ್ಯಾಬಾಯಿಯವರ ವ್ಯಕ್ತಿತ್ವ ಮತ್ತು ಅವರ ಸರಳ ಜೀವನ ಶೈಲಿ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕು. ಜೀವನದಲ್ಲಿ ನಮ್ಮಿಂದ ಸಾಧ್ಯವಾದಷ್ಟು ಇತರರಿಗೆ ಸಹಾಯ ಮಾಡಬೇಕು” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶ್ರೀಮತಿ ಆಶಾ ಅವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಸ್ವಾಗತಿಸಿ,ಶಿಕ್ಷಕ ದೇವಿಪ್ರಸಾದ್ ಜಿ.ಸಿ ವಂದಿಸಿದರು. ಈ ಸಂದರ್ಭದಲ್ಲಿ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.