ಸಿಲ್ವರ್ ಜುಬಿಲಿ ವರ್ಷಾಚರಿಸುತ್ತಿರುವ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಪೋಷಕರ ಕ್ರೀಡಾಕೂಟ ಹಾಗೂ ರಜತ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಡಿ.೨೧ ರಂದು ನಡೆಯಿತು.
ಕಾರ್ಯಕ್ರಮವನ್ನು ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ. ಉದ್ಘಾಟಿಸಿದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶಾಲಾ ಸಂಚಲಾಕರಾದ ರೆ.ಪಾ.ವಿಕ್ಟರ್ ಡಿಸೋಜ ವಹಿಸಿದ್ದರು.
ವೇದಿಕೆಯಲ್ಲಿ ಪೋಷಕ ಸಮತಿ ಉಪಾಧ್ಯಕ್ಷರುಗಳಾದ ಹೇಮನಾಥ್ ಕೊಡಿಯಾಲಬೈಲ್, ಶಶಿಧರ ಎಂ.ಜೆ., ಪ್ರಭೋದ್ ರೈ ಮೇನಾಲ, ಸಿಲ್ವರ್ ಜುಬಿಲಿ ಪ್ರಚಾರ ಸಮಿತಿ ಸಂಚಾಲಕ ಜೆ.ಕೆ. ರೈ, ಆರ್ಥಿಕ ಸಮಿತಿ ಸಂಚಾಲಕ ಪ್ರಸನ್ನ ಪೀಟರ್ ಡಿಸೋಜ ,ಮುಖ್ಯ ಶಿಕ್ಷಕಿ ಸಿಸ್ಟರ್ ಮೇರಿ ಸ್ಟೆಲ್ಲಾ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಪೊಷಕ ಸಮಿತಿ ಉಪಾಧ್ಯಕ್ಷ ಪ್ರಭೋದ್ ರೈ ಮೇನಾಲ ಸ್ವಾಗತಿಸಿ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಕೊರಗಪ್ಪ ಹಾಗೂ ಶಿಕ್ಷಕಿ ದೇವಿಲತಾ ಕಾರ್ಯಕ್ರಮ ನಿರೂಪಿಸಿದರು.