ರೋಟರಿ ಕ್ಲಬ್ ಸುಳ್ಯ ಸಿಟಿಯ ವತಿಯಿಂದ ಜಾಲ್ಸೂರು ಗ್ರಾಮದ ಪೋಲಿಯೋ ಪೀಡಿತ ಮಹಿಳೆಯೋರ್ವರಿಗೆ ನಡೆಯಲು ಸಹಾಯವಾಗುವ ಕ್ಯಾಲಿಪರ್ ಸಾಧನವನ್ನು ಉಚಿತವಾಗಿ ನೀಡಲಾಯಿತು.
ಜಾಲ್ಸೂರಿನ ಮಹಿಳೆ ಶ್ರೀಮತಿ ವನಜಾ ರವರು ಕಳೆದ ಹಲವಾರು ವರ್ಷಗಳಿಂದ ಪೋಲಿಯೋ ಪೀಡಿತ ರಾಗಿದ್ದು ನಡೆಯಲು ಅಶಕ್ತರಾಗಿದ್ದರು. ಇದನ್ನು ಮನಗಂಡ ರೋಟರಿ ಕ್ಲಬ್ ಸಿಟಿ ಯವರು ಕೊಡುಗೆಯನ್ನು ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷ ರೊ. ಶಿವಪ್ರಸಾದ್ ಕೆ.ವಿ, ನಿಕಟ ಪೂರ್ವ ಅಧ್ಯಕ್ಷ ರೊ. ಮುರಳೀಧರ ರೈ, ರೊ.ಗಿರೀಶ್ ನಾರ್ಕೋಡು ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.