ಸುಳ್ಯ ಲಯನ್ಸ್ ಕ್ಲಬ್ಬಿಗೆ ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ- ಪೂರ್ವಾಧ್ಯಕ್ಷರುಗಳಿಗೆ ಗೌರವ ಸನ್ಮಾನ

0

ಫೆ.22 ರಂದು ನಡೆಯಲಿರುವ ” ವರ್ಣ” ಪ್ರಾಂತೀಯ ಸಮ್ಮೇಳನದ ಆಮಂತ್ರಣ ಬಿಡುಗಡೆ

ಸುಳ್ಯ ಲಯನ್ಸ್ ಕ್ಲಬ್ಬಿಗೆ ಝೋನ್ 1 ವಲಯಾ ಧ್ಯಕ್ಷರ ಭೇಟಿ ಕಾರ್ಯಕ್ರಮವು ಜ.26 ರಂದು ನಡೆಯಿತು.

ವಲಯ ಅಧ್ಯಕ್ಷೆ ಲಯನ್ ರೂಪಾಶ್ರೀ ಜೆ. ರೈ ಮತ್ತು ಲಯನ್ ಜಯಂತ್ ರೈ ದಂಪತಿಯವರನ್ನು
ಕ್ಲಬ್ ನ ಸದಸ್ಯರು ಹೂವಿನಾರತಿ ಬೆಳಗಿ ಸ್ವಾಗತಿಸಿದರು.
ಬಳಿಕ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಲಯನ್ ರಾಮಕೃಷ್ಣ ರೈವರು ವಹಿಸಿದ್ದರು.
ವೇದಿಕೆಯಲ್ಲಿ ವಲಯಾಧ್ಯಕ್ಷೆ ಲಯನ್ ರೂಪಾಶ್ರೀ ಜೆ ರೈ, ಮಾಜಿ ಪ್ರಾಂತೀಯ ಅಧ್ಯಕ್ಷ ಲಯನ್ ಜಯಂತ್ ರೈ, ಝೋನ್ ಎನ್. ವೈ ಅಧ್ಯಕ್ಷೆ ಲಯನ್ ಅಮೃತ ಅಪ್ಪಣ್ಣ,‌ ಗುತ್ತಿಗಾರು ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಕುಶಾಲಪ್ಪ, ಸಂಪಾಜೆ ಲಯನ್ಸ್ ಕ್ಲಬ್ ಅಧ್ಯಕ್ಷೆ ಲಯನ್ ಪಾರ್ವತಿದೇವಯ್ಯ, ಲಯನ್ ವೀರಪ್ಪ ಗೌಡ ಕಣ್ಕಲ್, ಕಾರ್ಯದರ್ಶಿ ಲಯನ್ ರಾಮಚಂದ್ರ ಪಲ್ಲತಡ್ಕ , ಕೋಶಾಧಿಕಾರಿ ಲಯನ್ ರಮೇಶ್ ಶೆಟ್ಟಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ
ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಉಳಿಕೆಯಾದ ರೂ.66 ಸಾವಿರ ಮೊತ್ತವನ್ನು ಸಮಾಜ ಸೇವಾ ಕಾರ್ಯಕ್ಕೆ ವಿನಿಯೋಗಿಸುವ ಸಲುವಾಗಿ ಕ್ಲಬ್ಬಿಗೆ ಹಸ್ತಾಂತರಿಸಲಾಯಿತು.
ಪುತ್ತೂರಿನ ಪ್ರಜ್ಞಾ ಅನಾಥಾಶ್ರಮಕ್ಕೆ ಲಯನ್ ಆನಂದ ಪೂಜಾರಿ ಮತ್ತು ಲಯನ್ ಸುಷ್ಮಾ ದಂಪತಿ ರೂ.10 ಸಾವಿರ ಸಹಾಯ ಧನ ನೀಡಿದರು.
ಡಿ.ಆರ್ ಗಾರ್ಮೆಂಟ್ಸ್ ಮಾಲಕ ಲಯನ್ ರಾಮಚಂದ್ರ ರವರು ಉಡುಪುಗಳನ್ನು ನೀಡಿದರು.
ಲಯನ್ ನಳಿನಿಸೂರಯ್ಯ ರವರು ಟಿ.ವಿ ಯನ್ನು ಕೊಡುಗೆಯಾಗಿ ನೀಡಿದರು.
ಲಯನ್ ಸುಜಾತ ರವರು ಅಂಗನವಾಡಿ ಕೇಂದ್ರಕ್ಕೆ ಕುಕ್ಕರ್ ನ್ನು ಕೊಡುಗೆ ನೀಡಿದರು.
ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.


ಲಯನ್ಸ್ ಕ್ಲಬ್ಬಿನ ಎಲ್ಲಾ ಪೂರ್ವಾಧ್ಯಕ್ಷರನ್ನು ಈ ಸಂದರ್ಭದಲ್ಲಿ ಅಧ್ಯಕ್ಷರು ಸನ್ಮಾನಿಸಿದರು.

ಫೆ.22 ರಂದು ಸುಳ್ಯದಲ್ಲಿ ನಡೆಯಲಿರುವ “ವರ್ಣ” ಪ್ರಾಂತೀಯ ಸಮ್ಮೇಳನದ ಆಮಂತ್ರಣ ಪತ್ರವನ್ನು ಲಯನ್ ಎಂ.ಬಿ.ಸದಾಶಿವ ರವರು ಬಿಡುಗಡೆ ಮಾಡಿದರು.
ಪ್ರಾಂತೀಯ ಅಧ್ಯಕ್ಷ ಲಯನ್ ಗಂಗಾಧರ ರೈ ಹಾಗೂ ಸಂಚಾಲಕ ಲಯನ್ ಜಯಪ್ರಕಾಶ್ ರೈ ಯವರು ಸಮ್ಮೇಳನದ ವಿವರ ನೀಡಿದರು.

ಮಂಗಳೂರಿನಲ್ಲಿ
ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಲಬ್‌ ಸದಸ್ಯರು ಹಮ್ಮಿಕೊಂಡ ಸಿಂಹ ಘರ್ಜನೆ ಕಾರ್ಯಕ್ರಮದ ವಿವರವನ್ನು ಲಯನ್ ಹೂವಯ್ಯ ಸೂಂತೋಡು ತಿಳಿಸಿದರು.
ಲಯನ್ ಚಂದ್ರಿಕಾ ತಿಮ್ಮಯ್ಯ ಪ್ರಾರ್ಥಿಸಿದರು.


ಲಯನ್ ರಾಮಕೃಷ್ಣ ರೈ ಸ್ವಾಗತಿಸಿದರು. ಲಯನ್ ರಾಮಚಂದ್ರ ಪಲ್ಲತಡ್ಕ ವಾರ್ಷಿಕ ವರದಿ ವಾಚಿಸಿದರು. ಲಯನ್ ನಳಿನಿಸೂರಯ್ಯ ಸೂಂತೋಡು ವಲಯಾಧ್ಯಕ್ಷರ ಪರಿಚಯ ಮಾಡಿದರು. ಲಯನ್ ದೀಪಕ್ ಕುತ್ತಮೊಟ್ಟೆ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾಟದ ಲೆಕ್ಕ ಪತ್ರವನ್ನು ಮಂಡಿಸಿದರು. ಲಯನ್ ರಮೇಶ್ ಶೆಟ್ಟಿ ವಂದಿಸಿದರು. ಲಯನ್ ವೀಣಾ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ರಾತ್ರಿ ಸಹ ಭೋಜನದ ವ್ಯವಸ್ಥೆ ಮಾಡಲಾಗಿತ್ತು.