‘ಸಂವಿಧಾನ ಬದಲಾಯಿಸಿದ್ದು ಯಾರು?’ ಪುಸ್ತಕದ ಕುರಿತು ಸುಳ್ಯದಲ್ಲಿ ಗೋಷ್ಠಿ

0

ಮಂಥನ ವೇದಿಕೆ ಸುಳ್ಯ ಮತ್ತು ಅಧಿವಕ್ತಾ ಪರಿಷತ್ ಸುಳ್ಯ ಇದರ ಸಹಯೋಗದೊಂದಿಗೆ ಜ.27 ರಂದು ಸುಳ್ಯದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಸಂವಿಧಾನ ಬದಲಾಯಿಸಿದ್ದು ಯಾರು? ಪುಸ್ತಕದ ಕುರಿತು
ಗೋಷ್ಠಿ ಕಾರ್ಯಕ್ರಮ ನಡೆಯಿತು.

140 ಕೋಟಿ ಜನರ ರಕ್ಷಣೆ ಮಾಡುತ್ತಿರುವ ಸಂವಿಧಾನ ಭಾರತೀಯರೆಲ್ಲರ, ಭಾರತದ ಆಡಳಿತದ ಧರ್ಮ ಗ್ರಂಥ. ಸಂವಿಧಾನದ ಆಶಯವನ್ನು ಅನುಷ್ಠಾನ ಮಾಡಲು, ಇಡೀ ದೇಶಕ್ಕೆ ಅಮೃತ ಉಣಿಸಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲು ಅಟಲ್ ಬಿಹಾರಿ ವಾಜಪೇಯಿ ಹಾಗೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಹಲವು ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದೆ ಎಂದು ಮಾಜಿ ಶಿಕ್ಷಣ ಸಚಿವ ಎಸ್ ಮಹೇಶ್ ಹೇಳಿದರು.

‘ಸಂವಿಧಾನ ಬದಲಾಯಿಸಿದ್ದು ಯಾರು’ ಪುಸ್ತಕದ ಲೇಖಕರಾದ ವಿಕಾಸ್ ಕುಮಾರ್ ಪಿ ವಿಚಾರ ಮಂಡನೆ ಮಾಡಿ’ ಕಾಂಗ್ರೆಸ್, ಬಿಜೆಪಿ, ಇತರ ಸರಕಾರಗಳ ಅವಧಿಯಲ್ಲಿ ಒಟ್ಟು 106 ಬಾರಿ ಸಂವಿಧಾನ ತಿದ್ದುಪಡಿ ಆಗಿದೆ. ಈ ಸಂವಿಧಾನ ತಿದ್ದುಪಡಿಯನ್ನು ಅವಲೋಕಿಸಿದರೆ, ಮತ್ತು ಅದನ್ನು ಸೂಕ್ಷ್ಮವಾಗಿ ಅರ್ಥೈಸಿದರೆ ಸಂವಿಧಾನವನ್ನು ಬದಲಾಯಿಸಿರುವುದು ಯಾರು ಎಂದು ಅರ್ಥ ಆಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್ ಅಂಗಾರ,ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.

ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ರೈ ಕಾರ್ಯಕ್ರಮ ಉದ್ಘಾಟಿಸಿದರು.ವಕೀಲ ಜಗದೀಶ್ ಸ್ವಾಗತಿಸಿ, ರಾಜೇಶ್ ಮೇನಾಲ ವಂದಿಸಿದರು. ಕಿಶನ್ ಜಬಳೆ ಕಾರ್ಯಕ್ರಮ ನಿರೂಪಿಸಿದರು.