ಆಲೆಟ್ಟಿಸದಾಶಿವ ಕ್ಷೇತ್ರದ ಗುಂಡ್ಯ ಮಾಡಾರಮನೆ ಅರಸುದೈವ ಶ್ರೀ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ನೇಮೋತ್ಸವವು ಫೆ.3 ಮತ್ತು 4 ರಂದು ನಡೆಯಲಿದ್ದು ಅದರ ಪೂರ್ವ ಭಾವಿಯಾಗಿ ಇಂದು ಗೊನೆ ಮುಹೂರ್ತವು ನಡೆಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಸುಧಾಮ ಅಲೆಟ್ಟಿ, ಮಾಧವ ಗೌಡ ಗುಂಡ್ಯ, ದೇವಸ್ಯ ನಂಜುಂಡ, ಜಿ. ಭೋಜಪ್ಪ ಗೌಡ,ಮೇದಪ್ಪ ಗೌಡ ಗುಂಡ್ಯ ಉಪಸ್ಥಿತರಿದ್ದರು.