ಎಣ್ಣೆಮಜಲು ಶಾಲೆಯಲ್ಲಿ ಜೇಸಿಐ ಪಂಜ ಪಂಚಶ್ರೀಯ ವತಿಯಿಂದ ಗಣರಾಜ್ಯೋತ್ಸವ ಆಚರಣೆ ಹಾಗೂ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮ

0

ಜೇಸಿ ಐ ಪಂಜ ಪಂಚಶ್ರೀ ಪ್ರಾಂತ್ಯ ಎಫ್ ವಲಯ 15 ಇದರ ಆಶ್ರಯದಲ್ಲಿ ಜ. 26 ರಂದು ಎಣ್ಣೆಮಜಲು ದ.ಕ.ಜಿ.ಪಂ.ಕಿ.ಪ್ರಾ.ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ ಹಾಗೂ ಶಾಲಾ ಮಕ್ಕಳಿಗೆ ವಿವಿಧ ಬಹುಮಾನಗಳ ವಿತರಣಾ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ HGF ವಾಚಣ್ಣ ಕೆರೆಮೂಲೆ ವಹಿಸಿಕೊಂಡಿದ್ದರು.ಮುಖ್ಯ ಅತಿಥಿಗಳಾಗಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪೂರ್ವಾಧ್ಮಕ್ಷ ಸುಬ್ರಹ್ಮಣ್ಯ ಕುಳ , ಎಸ್ ಡಿ ಎಂ ಸಿ ಅಧ್ಯಕ್ಷ ಚಂದ್ರನಾಥ ಪಟೋಳಿ , ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಶೈಲಜಾ ,, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾಲಿನಿ ಎ, ಜೇಸಿಐ ಪಂಜ ಪಂಚಶ್ರೀ,ಜೊತೆ ಕಾರ್ಯದರ್ಶಿ ಜೇಸಿ ಪ್ರಕಾಶ್ ಅಳ್ಪೆ,ಕಾರ್ಯಕ್ರಮ ನಿರ್ದೇಶಕರು ಜೇಸಿ ಪುನೀತ್ ಎಣ್ಣೆಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಜೇಸಿವಾಣಿ ಜೇಸಿ ಗಗನ್ ಕಿನ್ನಿಕುಮೇರಿ ವಾಚಿಸಿದರು.ವೇದಿಕೆಗೆ ಜೇಸಿ ಪ್ರವೀಣ್ ಕುಂಜತ್ತಾಡಿ ಆಹ್ವಾನಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳ ಆಯೋಜಿಸಿ ಬಹುಮಾನವನ್ನು ಅತಿಥಿಗಳಿಂದ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜೇಸಿ ಸದಸ್ಯರು,ಎಸ್ .ಡಿ .ಎಮ್ .ಸಿ. ಸದಸ್ಯರು, ಪೋಷಕರು, ಶಿಕ್ಷಕರು ಮಕ್ಕಳು ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಜೊತೆ ಕಾರ್ಯದರ್ಶಿ ಜೇಸಿ ಪ್ರಕಾಶ್ ಅಳ್ಪೆ ವಂದಿಸಿದರು.