ಕಲ್ಲುಗುಂಡಿ : ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದ ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ನೆಲ್ಲಿಕುಮೇರಿ ಕಲ್ಲುಗುಂಡಿ ಇದರ ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಜ.26 ರಂದು ದೇವಸ್ಥಾನದಲ್ಲಿ ಗಣಪತಿ ಹೋಮದೊಂದಿಗೆ ನೆರವೇರಿತು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ಬಿಡುಗಡೆಗೊಳಿಸಿದರು.

ಈ ಸಂದರ್ಭ ಪುರೋಹಿತರಾದ ಶ್ರೀಕೃಷ್ಣ ಭಟ್ ಅರಂಬೂರು, ದೇವಾಲಯದ ಅರ್ಚಕರಾದ ಸೀತಾರಾಮ್ ಭಟ್, ಶ್ರೀ ಮಹಾ ವಿಷ್ಣುಮೂರ್ತಿ ದೈವಸ್ಥಾನದ ಅಧ್ಯಕ್ಷ ಜಗದೀಶ್ ರೈ, ಆಡಳಿತ ಮೊಕ್ತೇಸರ ಪಳನಿವೇಲು, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ರಾಮಚಂದ್ರ ಕಲ್ಲಗದ್ದೆ, ತಂಗರಾಜ್, ಕಾರ್ಯದರ್ಶಿ ವಸಂತ ಪೆಲ್ತಡ್ಕ, ಕೋಶಾಧಿಕಾರಿ ಬಿ.ಆರ್ ಪದ್ಮಯ್ಯ, ಜೊತೆ ಕಾರ್ಯದರ್ಶಿ ತ್ಯಾಗರಾಜ್, ಉಪ ಖಜಾಂಜಿ ಸುಮತಿ ಶಕ್ತಿವೇಲು, ಆಡಳಿತ ಸಮಿತಿ ಅಧ್ಯಕ್ಷರಾದ ಜ್ಞಾನಶೀಲನ್(ರಾಜು), ಖಜಾಂಜಿ ನಾಗಮುತ್ತು,
ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ ಪಿ ವಿ,
ಆಡಳಿತ ಸಮಿತಿ ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು, ಟ್ರಸ್ಟ್ ಸದಸ್ಯರು, ನೆಲ್ಲಿಕುಮೇರಿ ಫ್ರೆಂಡ್ಸ್ ಕ್ಲಬ್ ಪದಾಧಿಕಾರಿಗಳು ಊರ ಭಕ್ತಾಧಿಗಳು ಭಾಗವಹಿಸಿದ್ದರು.