ಮರ್ಕಂಜ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಚುನಾವಣೆ

0

ಕೂತೂಹಲದ ನಡೆ ತೋರಿಸುತ್ತಿರುವ ಈ ಬಾರಿಯ ಚುನಾವಣೆ

ಕಳೆದ ಅವಧಿಯಲ್ಲಿ 12ರಲ್ಲಿ 1೦ ಸ್ಥಾನಗಳು ಅವಿರೋಧ ಆಯ್ಕೆ – ಈ ಬಾರಿ 11 ಸ್ಥಾನಗಳಿಗೂ ಚುನಾವಣೆ

ಈ ಬಾರಿ 12 ಸ್ಥಾನಗಳಿಗೆ 29 ನಾಮಪತ್ರ ಸಲ್ಲಿಕೆ, ಇಬ್ಬರು ನಾಮಪತ್ರ ಹಿಂಪಡೆತ, ಒಂದು ಅವಿರೋಧ ಆಯ್ಕೆ

11 ಸ್ಥಾನಕ್ಕೆ ಚುನಾವಣೆ 26 ಅಭ್ಯರ್ಥಿಗಳು ಕಣದಲ್ಲಿ

ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ೧೨ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಒಟ್ಟು ೨೯ ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಕಳೆದ ಬಾರಿ ೧೨ ಸ್ಥಾನಗಳಲ್ಲಿ ೧೦ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದ ಮರ್ಕಂಜ ಸೊಸೈಟಿ ಈ ಬಾರಿ ೧೨ ಸ್ಥಾನಗಳಲ್ಲಿ ೧೧ ಸ್ಥಾನಗಳಿಗೂ ಚುನಾವಣೆ ನಡೆಯುತ್ತಿರುವುದರಿಂದ ಈ ಬಾರಿಯ ಚುನಾವಣೆ ಒಂದಷ್ಟು ಕೂತೂಹಲ ಕೆರಳಿಸಿದೆ.


ಸಾಮಾನ್ಯ ೬ ಸ್ಥಾನಕ್ಕೆ ೧೫ ಮಂದಿ ನಾಮಪತ್ರ ಸಲ್ಲಿಸಿದ್ದು, ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ವೆಂಕಟ್ರಮಣ ಅಂಗಡಿಮಜಲು, ನವೀನ ದೊಡ್ಡಿಹಿತ್ಲು, ದಯಾನಂದ ಪುರ, ಡೆಲ್ಲಿಕುಮಾರ ಕಾಯರ, ಮೋನಪ್ಪ ಪೂಜಾರಿ ಹೈದಂಗೂರು(ರೆಂಜಾಳ), ಪ್ರಶಾಂತ್ ರೈ ಪಾರೆಪ್ಪಾಡಿ, ಚೆನ್ನಕೇಶವ ದೋಳ ನಾಮಪತ್ರ ಸಲ್ಲಿಸಿದ್ದಾರೆ. ಮರ್ಕಂಜ ಸಹಕಾರ ಬಳಗದಿಂದ ವೆಂಕಪ್ಪ ಕಾಯರ, ವಿಶ್ವನಾಥ ರೈ ಗೂಡಂಬೆ, ಕೊರಗಪ್ಪ ಗೌಡ ಮಿಯ್ಯೋಣಿ, ಪುಷ್ಪರಾಜ್ ಪಾರೆಪ್ಪಾಡಿ, ರಮೇಶ ಕಬ್ಬಿನಡ್ಕ, ಜಯರಾಮ ದೇಶಕೋಡಿ ನಾಮಪತ್ರ ಸಲ್ಲಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳಾಗಿ ಮರ್ಕಂಜ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಅಚ್ಚುತ ತೇರ್ಥಮಜಲು, ಕೃಷ್ಣರಾಜ್ ಶೆಟ್ಟಿ ಬಲ್ನಾಡುಪೇಟೆ ನಾಮಪತ್ರ ಸಲ್ಲಿಸಿದ್ದಾರೆ.


ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ೧ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಸೊಸೈಟಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಮಹಾಬಲ ಕಟ್ಟಕ್ಕೋಡಿ, ಮರ್ಕಂಜ ಸಹಕಾರ ಬಳಗದಿಂದ ಮರ್ಕಂಜ ಗ್ರಾ.ಪಂ. ಸದಸ್ಯ ಯಶವಂತ ಸೂಟೆಗದ್ದೆ ಹಾಗೂ ಸ್ವತಂತ್ರ್ಯ ಅಭ್ಯರ್ಥಿಯಾಗಿ ಬಾಲಕೃಷ್ಣ ಗೌಡ ಜೋಗಿಮೂಲೆ ನಾಮಪತ್ರ ಸಲ್ಲಿಸಿದ್ದಾರೆ.
ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ೧ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಸರಸ್ವತಿ ಕೊರಗಪ್ಪ ಪೂಜಾರಿ ಕಕ್ಕಾಡು, ಮರ್ಕಂಜ ಸಹಕಾರ ಬಳಗದಿಂದ ಶಕುಂತಳಾ ದಿವಾಕರ ಆಚಾರ್ಯ ಪನ್ನೆ ನಾಮಪತ್ರ ಸಲ್ಲಿಸಿದ್ದಾರೆ.
ಅನುಸೂಚಿತ ಪಂಗಡ ಮೀಸಲು ೧ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಲಿಂಗಪ್ಪ ನಾಯ್ಕ ತೋಟಚಾವಡಿ, ಮರ್ಕಂಜ ಸಹಕಾರ ಬಳಗದಿಂದ ಡಿಲ್ಲಿಕುಮಾರ ಕೊಚ್ಚಿ, ಸ್ವತಂತ್ರ್ಯ ಅಭ್ಯರ್ಥಿಯಾಗಿ ವಿಜಕುಮಾರ ಬಳ್ಳಕ್ಕಾನ ನಾಮಪತ್ರ ಸಲ್ಲಿಸಿದ್ದಾರೆ.


ಅನುಸೂಚಿತ ಜಾತಿ ಮೀಸಲು ೧ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಅಣ್ಣು ಅಂಗಡಿಮಜಲು ಮತ್ತು ಮರ್ಕಂಜ ಸಹಕಾರ ಬಳಗದಿಂದ ಅಣ್ಣು ಮೊಗೇರ ಕಟ್ಟಕ್ಕೋಡಿ ನಾಮಪತ್ರ ಸಲ್ಲಿಸಿದ್ದಾರೆ.
ಮಹಿಳಾ ೨ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಶ್ರೀಮತಿ ಲತಾ ಚೆನ್ನಕೇಶವ ಜೋಗಿಮೂಲೆ, ಶ್ರೀಮತಿ ಅಕ್ಷತಾ ಚೆನ್ನಕೇಶವ ಜೋಗಿಮೂಲೆ ಮತ್ತು ಮರ್ಕಂಜ ಸಹಕಾರ ಬಳಗದಿಂದ ಜಯಶ್ರೀ ಕುಸುಮಾಧ ಕೊಜಂಬೆ, ಶ್ರೀಮತಿ ಶೀಲಾವತಿ ಕರುಣಾಕರ ಕೊಚ್ಚಿ ನಾಮಪತ್ರ ಸಲ್ಲಿಸಿದ್ದಾರೆ.
ಡಿ.೧೮ರಂದು ನಾಮಪತ್ರ ಪರಿಶೀಲನೆ ನಡೆಯಿತು.
ನಾಮಪತ್ರ ಹಿಂಪಡೆತ – ಅವಿರೋಧ ಆಯ್ಕೆ : ಸಾಮಾನ್ಯ ಕ್ಷೇತ್ರಕ್ಕೆ ಸಲ್ಲಿಸಿದ್ದ ಡಿಲ್ಲಿಕುಮಾರ ಕಾಯರ ಹಾಗೂ ಹಿಂದುಳಿದ ವರ್ಗ ಎ ಮೀಸಲು ಸ್ಥಾನಕ್ಕೆ ಸಲ್ಲಿಸಿದ್ದ ಮರ್ಕಂಜ ಸಹಕಾರ ಬಳಗದಿಂದ ಶಕುಂತಳಾ ದಿವಾಕರ ಆಚಾರ್ಯ ಪನ್ನೆರವರು ತಮ್ಮ ನಾಮಪತ್ರ ಹಿಂಪಡೆದ ಕಾರಣ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಸರಸ್ವತಿ ಕೊರಗಪ್ಪ ಪೂಜಾರಿ ಕಕ್ಕಾಡು ಅವಿರೋಧ ಆಯ್ಕೆಯಾದರು. ಆ ಮೂಲಕ ಅಂತಿಮ ಕಣದಲ್ಲಿ ಒಟ್ಟು ೨೭ ಅಭ್ಯರ್ಥಿಗಳು ಕಣದಲ್ಲಿದ್ದಾರೆ.