ಎಲಿಮಲೆ : ಅದ್ದೂರಿಯಿಂದ ನಡೆಯುತ್ತಿರುವ ದೇವಚಳ್ಳ ಸರಕಾರಿ ಶಾಲಾ ‘ಶತ ಸಂಭ್ರಮ’

0

ಇಂದು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ; ಶಾಲಾ ದಿನಗಳ ನೆನಪು – ಗೌಜಿ ಗಮ್ಮತ್

ಸಾಂಸ್ಕೃತಿಕ ವೈಭವ, ಸಮಾರೋಪ ಸಮಾರಂಭ – ಶಿಕ್ಷಕರಿಗೆ ಸನ್ಮಾನ

ರಾತ್ರಿ ‘ಮುರಳಿ ಈ ಪಿರ ಬರೋಲಿ’ ನಾಟಕ ಪ್ರದರ್ಶನ

ಎಲಿಮಲೆಯ ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ‘ಶತ ಸಂಭ್ರಮ’ ನಿನ್ನೆಯಿಂದ ಅದ್ದೂರಿಯಾಗಿ ನಡೆಯುತ್ತಿದ್ದು, ಇಂದು (ಜ.25) ಬೆಳಗ್ಗೆ 10ರಿಂದ ಹಳೆ ವಿದ್ಯಾರ್ಥಿಗಳ ಸ್ನೇಹಮಿಲನ, ಸಭಾ ಕಾರ್ಯಕ್ರಮ ನಡೆಯಲಿದೆ. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿಪ್ರಸಾದ್ ಬಿ.ವಿ ಅಧ್ಯಕ್ಷತೆ ವಹಿಸುವರು‌. ನಾರಾಯಣ ಗೌಡ ಬಾಳೆತೋಟ ಉದ್ಘಾಟಿಸುವರು. ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಕೆ.ಆರ್. ಗಂಗಾಧರ ಆಶಯ ಭಾಷಣ ಮಾಡಲಿದ್ದಾರೆ.

ಪೂ. 11ರಿಂದ ಹಿರಿಯ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಶಾಲಾ ದಿನಗಳ ಸವಿ ನೆನಪು ಗೌಜಿ ಗಮ್ಮತ್ ನಡೆಯಲಿದೆ.

ಮಧ್ಯಾಹ್ನ ಗಂಟೆ 2 ರಿಂದ ಶ್ರೀ ಶಾರದಾಂಬಾ ಯಕ್ಷಗಾನ ಅಧ್ಯಯನ ಕೇಂದ್ರ ಕಲಾ ಕ್ಷೇತ್ರ ಪಂಜ ಇದರ ವಿದ್ಯಾರ್ಥಿಗಳಿಂದ ಯಕ್ಷಗಾನ ‘ಶ್ರೀ ರಾಮಾಯಣ ದರ್ಶನಂ’ ನಡೆಯಲಿದೆ.

ಸಂಜೆ 5ರಿಂದ ಹಿರಿಯ ವಿದ್ಯಾರ್ಥಿಗಳಿಂದ, ಪೋಷಕರಿಂದ ಸಾಂಸ್ಕೃತಿಕ ವೈವಿದ್ಯ ಹಾಗೂ ಸಂಜೆ 6.30ರಿಂದ ಸಮಾರೋಪ ಸಮಾರಂಭ, ಶಿಕ್ಷಕರಿಗೆ ಸನ್ಮಾನ ನಡೆಯಲಿದೆ.
ಸಮಾರೋಪ ಸಮಾರಂಭ ನಡೆಯಲಿದೆ. ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಎ.ವಿ ತೀರ್ಥರಾಮ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸನ್ಮಾನ ನೆರವೇರಿಸುವರು.


ವಿಶೇಷ ಆಹ್ವಾನಿತರಾಗಿ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ.ವಿ ಭಾಗವಹಿಸುವರು. ರಬ್ಬರ್ ಅಭಿವೃದ್ಧಿ ಮಂಡಳಿಯ ಸದಸ್ಯರಾದ ಮುಳಿಯ ಕೇಶವ ಭಟ್, ಗ್ರಾಮ ಪಂಚಾಯತ್ ಸದಸ್ಯರಾದ ಪ್ರೇಮಲತಾ ಕೇರ, ರಾಜೇಶ್ವರಿ ಮಾವಿನಕಟ್ಟೆ, ಪ್ರಮುಖರಾದ ನಿತ್ಯಾನಂದ ಮುಂಡೋಡಿ,ವೆಂಕಟ್ ದಂಬೆಕೋಡಿ, ಚಂದ್ರಶೇಖರ ತಳೂರು, ಪಿಡಿಒ ಬಿ.ಗುರುಪ್ರಸಾದ್, ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಸಂಧ್ಯಾ ಭಾಗವಹಿಸಲಿದ್ದಾರೆ.

ರಾತ್ರಿ 10 ಗಂಟೆಯಿಂದ ಜ್ಞಾನ ದೀಪ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ.

ರಾತ್ರಿ 11.15ರಿಂದ ಗಯಾಪದ ಕಲಾವಿದೆರ್ ಉಬರ್ ಇವರಿಂದ ತುಳು ಹಾಸ್ಯಮಯ ನಾಟಕ ‘ಮುರಳಿ ಈ ಪಿರ ಬರೋಲಿ’ ನಾಟಕ ಪ್ರದರ್ಶನ ಗೊಳ್ಳಲಿದೆ.