ಪೈಚಾರ್ :ಕುವ್ವತುಲ್ ಇಸ್ಲಾಂ ಮದ್ರಸಾ ವತಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ದ್ವಜಾರೋಹಣ ವನ್ನು ಪೈಚಾರ್ ಬದ್ರಿಯಾ ಜುಮಾ ಮಸ್ಜಿದ್ ಅಧ್ಯಕ್ಷರಾದ ಇಬ್ರಾಹಿಂ ಹಾಜಿ ಪಿ ಯವರು ನರವೇರಿಸಿದರು. ಸ್ಥಳೀಯ ಖತೀಬರಾದ ಶಮೀರ್ ಅಹ್ಮದ್ ನಈಮಿ ದುವಾ ಹಾಗು ಸಂದೇಶ ಭಾಷಣ ಮಾಡಿದರು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಸದರ್ ಉಸ್ತಾದ್ ಹಂಝ ಝುಹರಿ ನೆರವೇರಿಸಿ ಸಂವಿಧಾನ ಪೀಠಿಕೆ ವಾಚಿಸಿದರು. ಹನೀಫ್ ಮದನಿ,ಬದ್ರಿಯಾ ಜುಮಾ ಮಸ್ಜಿದ್ ಪೈಚಾರ್ ಪ್ರದಾನ ಕಾರ್ಯದರ್ಶಿ ಹನೀಫ್ ಪಿ ಕೆ, ಅಲ್ ಅಮೀನ್ ಯೂತ್ ಸೆಂಟರ್ ಉಪಾಧ್ಯಕ್ಷ ಹನೀಫ್ ಅಲ್ಫಾ,,ಬಿ ಜೆ ಮ್ ಮಾಜಿ ಕಾರ್ಯದರ್ಶಿ ರಝಕ್ ಬಿ ಲ್, ಶಾಫಿ ಕುಂಬಕ್ಕೋಡ್, ಅಲ್ ಅಮೀನ್ ಸಂಘಟನಾ ಕರಾಯದರ್ಶಿ ಉನೈಸ್ ಪೈಚಾರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.