ಪಂಜ ಅಂಚೆ ಕಛೇರಿಯಲ್ಲಿ ಹೊಸ ಆಧಾರ್ ಮತ್ತು ತಿದ್ದುಪಡಿ ಕೇಂದ್ರವನ್ನು ಪುನರ್ ಸ್ಥಾಪಿಸ ಬೇಕೆಂದು ಪಂಜ ಲಯನ್ಸ್ ಕ್ಲಬ್ ವತಿಯಿಂದ ಪುತ್ತೂರು ವಿಭಾಗ ಸಬ್ ಸುಪರಿಂಟೆಂಟೆ ಆಫ್ ಪೋಸ್ಟಲ್ ಆಫೀಸ್ ರವರಿಗೆ ಮನವಿ ನೀಡಲಾಯಿತು.
ಸುಳ್ಯ ತಾಲೂಕಿನ ಪಂಜ ಹೋಬಳಿ ಕೇಂದ್ರವಾಗಿದ್ದು ಪ್ರಸ್ತುತ ಉಪತಹಶೀಲ್ದಾರರು ಕಾರ್ಯನಿರ್ವಹಿಸುತ್ತಿರುವ ನಾಡಕಛೇರಿಯನ್ನು ಹೊಂದಿರುತ್ತದೆ. ಈ ಹಿಂದೆ ಇಲ್ಲಿಯ ಅಂಚೆ ಕಛೇರಿಯಲ್ಲಿ ಆಧಾರ್ ತಿದ್ದುಪಡಿಗೆ ಅವಕಾಶವಿತ್ತು. ಕಾಲಾನುಭಾಗದಲ್ಲಿ ಈ ವ್ಯವಸ್ಥೆ ನಿಂತು ಹೋಯಿತು. ಲಯನ್ಸ್ ಕ್ಲಬ್ ಪಂಜದ ವತಿಯಿಂದ ಈಗಾಗಲೇ 2 ಬಾರಿ ಆಧಾರ್ ತಿದ್ದುಪಡಿ ಶಿಬಿರದಲ್ಲಿ ಬೃಹತ್ ಸಂಖ್ಯೆಯಲ್ಲಿ ಫಲಾನುಭವಿಗಳು ಸೇರಿದ್ದರು. ಪಂಜಕ್ಕೆ ತೀರಾ ಅಗತ್ಯವಾದ ಆಧಾರ್ ತಿದ್ದುಪಡಿ ವ್ಯವಸ್ಥೆಯನ್ನು ಸ್ಥಳೀಯ ಅಂಚೆ ಕಛೇರಿಯಲ್ಲಿ ಪುನರ್ ಸ್ಥಾಪಿಸಬೇಕಾಗಿ ಈ ಮೂಲಕ ಸಾರ್ವಜನಿಕ ವತಿಯಿಂದ ಪಂಜ ಲಯನ್ಸ್ ಕ್ಲಬ್ ಪರವಾಗಿ ತಮ್ಮಲ್ಲಿ ವಿನಮ್ರವಾಗಿ ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಮನವಿ ನೀಡಲಾಗಿದೆ.
ಈ ಸಂದರ್ಭದಲ್ಲಿ ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಲ. ಶಶಿಧರ್ ಪಳಂಗಾಯ.. ಕಾರ್ಯದರ್ಶಿ ಲ. ಮೋಹನ್ ದಾಸ್ ಕೂಟಾಜೆ . . ಜೊತೆಕಾರ್ಯದರ್ಶಿ ಲ. ವಾಸುದೇವ ಮೇಲ್ವಾಡಿ .ಪೂರ್ವಾಧ್ಯಕ್ಷರಾದ ಲ. ಪುರುಷೋತ್ತಮ ದಂಬೆಕೋಡಿ ಉಪಸ್ಥಿತರಿದ್ದರು