ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸುಳ್ಯ ತಾಲೂಕು ಬೆಳ್ಳಾರೆ ವಲಯ ಇದರ ವತಿಯಿಂದ
ಇಂದು 76 ನೇ ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ವಿವಿಧ ಶಾಲೆಗಳಿಗೆ ಕೊಡುಗೆ ನೀಡಲಾಯಿತು.
ಐವರ್ನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣ ಅಭಿವೃದ್ಧಿ ಗೆ ರೂ. 25 ಸಾವಿರ ಅನುದಾನದ ಮಂಜುರಾತಿ ಪತ್ರವನ್ನು ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ ಮತ್ತು 8 ಬೆಂಚು ಡೆಸ್ಕ್ ಗಳನ್ನು ದಿನೇಶ್ ಮಡ್ತಿಲ ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರು ಮತ್ತು ಶಾಲಾ ಮುಖ್ಯೋಪಾಧ್ಯಾಯ ರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರಾದ ವಿಶಾಲ ಕೆ, ಬೆಳ್ಳಾರೆ ವಲಯಾಧ್ಯಕ್ಷರಾದ ವೇದಾ ಹೆಚ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾದ ಜಿ.ಟಿ ವೆಂಕಪ್ಪ ಗೌಡ, ಪಾಲೆಪ್ಪಾಡಿ ಒಕ್ಕೂಟದ ಅಧ್ಯಕ್ಷ ರಾಮಚಂದ್ರ, ಎಸ್.ಡಿ.ಎಂ.ಸಿ ಅಧ್ಯಕ್ಷ ಹೊನ್ನಪ್ಪ ಡಿ, ನಿವೃತ ಮುಖ್ಯೋಪಾಧ್ಯಯರಾದ ವೀರಪ್ಪ ಗೌಡ,
ಗ್ರಾಮದ
ಸೇವಾಪ್ರತಿನಿಧಿ ರಶ್ಮಿತಾ ಚರಣ್, ಒಕ್ಕೂಟದ ಪದಾಧಿಕಾರಿಗಳಾದ ಸುಂದರಿ, ಶಿನಪ್ಪ ಚೊಕ್ಕಾಡಿ, ಶಾಲಾ ಅಧ್ಯಾಪಕ ವೃಂದ, ಎಸ್.ಡಿ.ಎಂ.ಸಿ ಸದಸ್ಯರು, ವಿದ್ಯಾರ್ಥಿಗಳು, ಪೋಷಕರು, ಸಂಘದ ಸದಸ್ಯರು ಉಪಸ್ಥಿತರಿದ್ದರು.