ಸುಳ್ಯದ ಸೈಂಟ್ ಬ್ರಿಜಿಡ್ಸ್ ಚರ್ಚ್ ವತಿಯಿಂದ ಸಾಂತಾಕ್ಲಾಸ್ ರೋಡ್ ಶೋ ಡಿ. 20ರಂದು ಸಂಜೆ ನಡೆಯಿತು.
ಪೈಚಾರಿನಿಂದ ಆರಂಭವಾದ ಯಾತ್ರೆ ಸುಳ್ಯ ಪೊಲೀಸ್ ಠಾಣೆ, ಗಾಂಧಿನಗರದಲ್ಲಿರುವ ಗಾಂಧಿ ಪ್ರತಿಮೆ, ಕೆವಿಜಿ ಕ್ಯಾಂಪಸ್, ಕೆವಿಜಿ ಆಯುರ್ವೇದ ಕಾಲೇಜ್ ಆಗಿ ಸುಳ್ಯ ಸೈಂಟ್ ಬ್ರಿಜಿಡ್ ಚರ್ಚ್ ಗೆ ಆಗಮನವಾಯಿತು.
ಸುಳ್ಯ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳಿಗೆ ಕೇಕ್ ಕೊಟ್ಟು ಶುಭಾಶಯ ತಿಳಿಸಲಾಯಿತು.
ಕೇಂದ್ರದ ಮಾಜಿ ಸಚಿವ ದಿ. ಆಸ್ಕರ್ ಫೆರ್ನಾಂಡಿಸ್ ರವರ ಆಪ್ತ ಸಹಾಯಕರಾಗಿದ್ದ ಗಫುರ್ ರವರು ಗಾಂಧಿ ಪ್ರತಿಮೆಯ ಬಳಿ ಕ್ರಿಸ್ಮಸ್ ಸಂದೇಶ ನೀಡಿದರು.
ಚರ್ಚ್ ನ ಪಾಲನಾ ಪರಿಷತ್ ನ ಉಪಾಧ್ಯಕ್ಷ ನವೀನ್ ಮಚಾದೋ, ಕಾರ್ಯದರ್ಶಿ ಜೂಲಿಯಾನ ಕ್ರಾಸ್ತಾ, ಸಿ. ಅಂಥೋನಿ ಮೇರಿ, ಸಿ. ಗ್ರೇಸಿ, ಚರ್ಚ್ ಬಾಂಧವರು, ಸರ್ವ ಧರ್ಮದ ಮುಖಂಡರುಗಳು ಉಪಸ್ಥಿತರಿದ್ದರು.