ಶ್ರೀರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯು 14ರ ವಯೋಮಾನದ ಬಾಲಕರ ಹಾಗೂ 17ರ ವಯೋಮಾನದ ಬಾಲಕರ ಹಾಗೂ ಬಾಲಕಿಯರ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ (ರಿ ) ಗುತ್ತಿಗಾರಿನಲ್ಲಿ ನಡೆದ ಬಾಲಕ- ಬಾಲಕಿಯರ ಮುಕ್ತ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟದಲ್ಲಿ ಶ್ರೀರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ 14ನೇ ವಯೋಮಾನ ಬಾಲಕರ ಹಾಗೂ 17ನೇ ವಯೋಮಾನದ ಬಾಲಕರ ಮತ್ತು ಬಾಲಕಿಯರ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ . 14ನೇ ವಯೋಮಾನದ ಬಾಲಕರ ವಿಭಾಗದಲ್ಲಿ ಬೆಸ್ಟ್ ಆಲ್ ರೌಂಡರ್ ಸಮರ್ಥ್ ಬಾಹುಬಲಿ ಯಲ್ಲಟ್ಟಿ ಹಾಗೂ ಬೆಸ್ಟ್ ಕ್ಯಾಚರ್ ಲತೇಶ್, 17ನೇ ವಯೋಮಾನದ ಬಾಲಕರ ವಿಭಾಗದಲ್ಲಿ ಅಭಿಷೇಕ್ ಹೊಸಮನಿ ಬೆಸ್ಟ್ ಆಲ್ ರೌಂಡರ್ ಹಾಗೂ ಬೆಸ್ಟ್ ರೈಡರ್ ಚಿಂತನ್ ಮತ್ತು ಬಾಲಕಿಯರ ವಿಭಾಗದಲ್ಲಿ ಧನ್ವಿ ಎಂ ಬೆಸ್ಟ್ ಆಲ್ ರೌಂಡರ್ ಹಾಗೂ ರಮ್ಯ ಬೆಸ್ಟ್ ರೈಡರ್ ಪ್ರಶಸ್ತಿಯನ್ನು ಪಡೆದುಕೊಂಡರು. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಮುಖ್ಯ ಗುರುಗಳ ಮಾರ್ಗದರ್ಶನದಲ್ಲಿ ಮಾಧವ ಬಿ ಕೆ, ಜಸ್ವಂತ್, ಮಂಜುನಾಥ್ ಹಾಗೂ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲಾ ರೈ ತರಬೇತಿ ನೀಡಿದ್ದರು.