ಭೂ ಅಭಿವೃದ್ಧಿ ಬ್ಯಾಂಕ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳನ್ನು ಗೆಲ್ಲಿಸಲು ಶೈಲೇಶ್ ಅಂಬೆಕಲ್ಲು ಮನವಿ

0

ಜನವರಿ 12 ರಂದು ನಡೆಯಲಿರುವ ಸುಳ್ಯ ಭೂ ಅಭಿವೃದ್ಧಿ ಬ್ಯಾಂಕ್ ನ ನಿರ್ದೇಶಕತ್ವದ ವಿವಿಧ ಸ್ಥಾನಗಳ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳನ್ನು ಗೆಲ್ಲಿಸಲು ಜಿಲ್ಲಾ ಸಹಕಾರಿ ಯೂನಿಯನ್ ಮಾಜಿ ನಿರ್ದೇಶಕ, ದೇವಚಳ್ಳ ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಮನವಿ ಮಾಡಿಕೊಂಡಿದ್ದಾರೆ.

” ಸಾಲಗಾರರಲ್ಲದ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದೇನೆ. ಜಿಲ್ಲಾ ಸಹಕಾರಿ ಯೂನಿಯನ್ ನ ನಿರ್ದೇಶಕರಾಗಿ ಎರಡು ಬಾರಿ, ಗುತ್ತಿಗಾರು ಸಹಕಾರಿ ಸಂಘದ ನಿರ್ದೇಶಕರಾಗಿ, ಸುಳ್ಯ ಟಿಎಪಿಸಿಎಂಎಸ್ ನಿರ್ದೇಶಕರಾಗಿ, ಸುಳ್ಯ ಸಹಕಾರಿ ಯೂನಿಯನ್‌ನ ಅದ್ಯಕ್ಷರಾಗಿ ,ಸುಳ್ಯ ವೆಂಕಟ್ರಮಣ ಸೊಸೈಟಿಯ ನಿರ್ದೇಶಕರಾಗಿ , ಜಿಲ್ಲಾ ಯುವಜನ ಒಕ್ಕೂಟದ ಸ್ಥಾಪಕಾದ್ಯಕ್ಷರಾಗಿ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ದುಡಿದ ಅನುಭವ ನನ್ನದು.


ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿ ಕೊರೊನಾ ಅವಧಿಯಲ್ಲಿ ವಾರಿಯರ್ ಆಗಿ ತೊಂದರೆಗೆ ಸಿಲುಕಿದವರ ಮನೆಗಳಿಗೆ ನೆರವಾಗಿದ್ದೇನೆ. ನೂರಕ್ಕೂ ಹೆಚ್ಚು ಭಾರಿ ರಕ್ತದಾನ ಮಾಡಿ ಸಹಾಯಹಸ್ತ ಚಾಚಿದ್ದೇನೆ. ಪ್ರಸ್ತುತ ಸುಳ್ಯ ತಾಲೂಕು ಪಂಚಾಯತ್ ಒಕ್ಕೂಟದ ಅಧ್ಯಕ್ಷನಾಗಿದ್ದೇನೆ. ಎಲ್.ಡಿ.ಬ್ಯಾಂಕ್ ನ ನಿರ್ದೇಶಕರ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ನನ್ನೊಂದಿಗೆ ಸಾಲಗಾರ ಕ್ಷೇತ್ರದ ಸುಳ್ಯ ವಲಯದಿಂದ ಜ್ಞಾನೇಶ್ವರ ಶೇಟ್, ನೆಲ್ಲೂರು ಕೆಮ್ರಾಜೆ ವಲಯದಿಂದ ದೇವಿಪ್ರಸಾದ್ ಸುಳ್ಳಿ, ಜಾಲ್ಸೂರು ವಲಯದಿಂದ ಸುರೇಶ್ ಸ್ಪರ್ಧಿಸುತ್ತಿದ್ದಾರೆ. ಇವರಲ್ಲದೆ, ಸ್ಪರ್ಧೆಗೆ ಇಳಿದಿದ್ದ ಪಂಬೆತ್ತಾಡಿ ವಲಯದ ಸುಬ್ರಮಣ್ಯ ಭಟ್ ಹಾಗೂ ಕಳಂಜ ವಲಯದ ಈಶ್ವರಚಂದ್ರ ಈಗಾಗಲೇ ಅವಿರೋದವಾಗಿ ಆಯ್ಕೆಯಾಗಿದ್ದಾರೆ ಎಂದು ಶೈಲೇಶ್ ಅಂಬೆಕಲ್ಲು ತಿಳಿಸಿದ್ದಾರೆ.