ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಮೈಸೂರು ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ನಟರಾಜ ನೃತ್ಯನಿಕೇತನ ಕಲ್ಲುಗುಂಡಿ ಸಂಪಾಜೆ ದ.ಕ. ಮತ್ತು ಅರಂತೋಡು, ಸುಳ್ಯ, ಮಂಗಳೂರು ಶಾಖೆಗಳಿಂದ ಒಟ್ಟು 15 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.
ಇವರೆಲ್ಲರೂ ನೃತ್ಯನಿಕೇತನದ ನಿರ್ದೇಶಕಿ ವಿದುಷಿ ಇಂದುಮತಿ ನಾಗೇಶ್‌ರವರ ವಿದ್ಯಾರ್ಥಿಗಳು.
ವಿದ್ಯಾರ್ಥಿಗಳಾದ ಮಾನ್ವಿ ಜಿ. ಕೊಟ್ಟಾರಿ ಮಂಗಳೂರು (ಶೇ.೯೧), ಲೌಖ್ಯ ದೇರಾಜೆ (ಶೇ.೮೯), ಧನ್ವಿ ಉಳುವಾರು (ಶೇ.೮೯), ಆಧ್ಯಾ ಆಂಬ್ರೋಟಿ (ಶೇ.೮೯), ಆರಾಧ್ಯ ಆಂಬ್ರೋಟಿ (ಶೇ.೮೮), ಅನುಕ್ತಾ ಸಜೀಪ (ಶೇ.೮೮), ಚಾರ್ವಿ ಹೊದ್ದೆಟ್ಟಿ (ಶೇ.೮೭), ಧ್ವನಿ ಕಾಯರ (ಶೇ.೮೫), ವಿಹಾನಿ ಜಾಕೆ (ಶೇ. ೮೨) ಭೂಮಿಕಾ ಮಡಿಕೇರಿ (ಶೇ.೮೧), ಪ್ರಣಮ್ಯ ಸುಳ್ಯ (ಶೇ.೭೯), ಶ್ರೇಯಸ್ ಹೊಸೂರು (ಶೇ.೭೮), ತ್ರಿಶಾ ಶೆಟ್ಟಿ ಮಂಗಳೂರು (ಶೇ.೭೫), ಆದಿಶ ಆಳ್ವ ಮಂಗಳೂರು (ಶೇ.೭೦), ಜನನಿ ಪೂಜಾರಿಗದ್ದೆ (ಶೇ.೬೭) ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ.